Webdunia - Bharat's app for daily news and videos

Install App

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

Sampriya
ಬುಧವಾರ, 16 ಜುಲೈ 2025 (16:04 IST)
Photo Credit X
ಬೆಂಗಳೂರು: ರಾಮನಗರ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಕೂಡ ಅದ್ಧೂರಿಯಾಗಿ ನಡೀತಿದೆ. ಕನ್ನಡ ಸಿನಿಮಾ ರಂಗದ ನಟ ನಟಿಯರು ವೇದಿಕೆಯಲ್ಲಿ ಹೆಜ್ಜೆ ಹಾಕಿ, ಸಂಭ್ರಮಿಸಿದ್ದಾರೆ. 

ನಟ ಯುವರಾಜ್‌ಕುಮಾರ್ ಅವರು ಕೂಡಾ ಎಕ್ಕ ಸಿನಿಮಾದ ತಂಡದ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡರು. ಈ ವೇಳೆ ಯುವ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಹೋರಟಾಗ ಡಿ ಬಾಸ್ ಡಿ ಬಾಸ್ ಎಂಬ ಕೂಗು ಜೋರಾಗಿ ಕೇಳಿಸಿತು. 

ದರ್ಶನ್ ಅಭಿಮಾನಿಗಳ ಕೂಗು ಕೇಳಿ ಯುವ ಸ್ವಲ್ಪ ಸಮಯ ಸೈಲೆಂಟ್ ಆಗಿದ್ದಾರೆ.  ಬಳಿಕ 'ಎಕ್ಕ' ಸಿನಿಮಾ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 'ಅಪ್ಪು' ಸಿನಿಮಾ ಡೈಲಾಗ್ ಕೂಡ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಸಾಕಷ್ಟು ನಟರ ಅಭಿಮಾನಿಗಳು ಬಂದಿದ್ದಾರೆ ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ. ಯಾವುದೇ ಕಾರ್ಯಕ್ರಮ ಆಗಲಿ, ವೇದಿಕೆಯಲ್ಲಿ ಯಾರೇ ಇರಲಿ, ಡಿ ಬಾಸ್ ಹವಾ ಇರುತ್ತದೆ ಎಂದು ದರ್ಶನ್ ಅಭಿಮಾನಿಗಳು ವೀಡಿಯೋ ವೈರಲ್ ಮಾಡ್ತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡುವಾಗ ಕೂಡ ಡಿಬಾಸ್.. ಡಿಬಾಸ್ ಎಂದು ಅಭಿಮಾನಿಗಳು ಕೂಗಿದ್ದಾರೆ. ಅದಕ್ಕೆ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. "ಡಿಬಾಸ್ ಎಲ್ಲಾ ಮಾತಾಡ್ತೀನಿ ಇರ್ರೋ.. ನಾನು ಕರೀಬೇಕು ಅಂತ ಇದ್ದೆ. ನೀವ್ ಸರಿ ಇಲ್ಲ ಅಂತ ಸುಮ್ಮನಾಗೋದೆ. ನೀವು ಸರಿ ಅಂದ್ರು, ಬೇರೆಯವರು ಸರಿಯಿಲ್ಲ ಅಂತ 24 ಗಂಟೆ ತೋರಿಸ್ತಾರೆ" ಎಂದು ನಕ್ಕಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಖ್ಯಾತ ನಟ ಫಹಾದ್ ಕೈಯಲ್ಲಿ ಕೀಪ್ಯಾಡ್ ಮೊಬೈಲ್, ಬೆಲೆ ಕೇಳಿದ್ರೆ ಅಚ್ಚರಿ ಆಗುವುದು ಗ್ಯಾರಂಟಿ

ಹೆಣ್ಣು ಮಗುವಿಗೆ ಜನ್ಮನೀಡಿದ ಕಿಯಾರಾ ಅಡ್ವಾಣಿ: ಬಾಲಿವುಡ್‌ನ ಸ್ಟಾರ್‌ ಜೋಡಿ ಮನೆಯಲ್ಲಿ ಸಂಭ್ರಮ

ನಟಿ ವೈಷ್ಣವಿ ಗೌಡ ಮದುವೆಯಾದ್ರೂ ತಾಳಿ ಹಾಕಲ್ಲ ಯಾಕೆ: ಸ್ಪಷ್ಟನೆ ನೀಡಿದ ನಟಿ

ನಟಿ ಬಿ. ಸರೋಜಾ ದೇವಿ ನೆನಪಿಗೆ ವಿಶೇಷ ಗೌರವ ನೀಡಲು ಮುಂದಾದ ರಾಜ್ಯ ಸರ್ಕಾರ

ದಿ ಡೆವಿಲ್ ಸಿನಿಮಾ ತಂಡದಿಂದ ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments