Publish Date: Tue, 04 May 2021 (10:14 IST)
Updated Date: Tue, 04 May 2021 (10:15 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂ ಪುಟಗಳು ಹ್ಯಾಕ್ ಆಗುತ್ತಿರುವುದು ಮಾಮೂಲು ಸಂಗತಿ ಆಗಿದೆ. ಇದೀಗ ಫೇಸ್ ಬುಕ್ ನಲ್ಲಿ ಹ್ಯಾಕರ್ ಗಳ ಕಾಟ ತೀವ್ರವಾಗಿದೆ.
ನಟಿ ರಂಜಿನಿ ರಾಘವನ್ ತಮ್ಮ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ಪೇಜ್ ನ ಆಡ್ಮಿನ್ ಈಗ ನಾನಲ್ಲ. ನನ್ನ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್, ಫೋಟೋ, ಮೆಸೇಜ್ ಏನೇ ಮಾಡಿದರೂ ಯಾರೂ ಪ್ರತಿಕ್ರಿಯಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲ, ಇದನ್ನು ರಿಪೋರ್ಟ್ ಮಾಡಿ, ನನಗೆ ನನ್ನ ಪೇಜ್ ಮರಳಿಸಲು ಸಹಾಯ ಮಾಡಿ ಎಂದು ನೆಟ್ಟಿಗರಿಗೆ ಮನವಿ ಮಾಡಿದ್ದಾರೆ. ಕೇವಲ ಸೆಲೆಬ್ರಿಟಿಗಳದ್ದು ಮಾತ್ರವಲ್ಲ, ಜನ ಸಾಮಾನ್ಯರ ಪೇಜ್ ಗಳು ಹ್ಯಾಕ್ ಆಗುತ್ತಿವೆ.