Publish Date: Sun, 10 Jun 2018 (12:15 IST)
Updated Date: Sun, 10 Jun 2018 (12:17 IST)
ಬೆಂಗಳೂರು: ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸಿನಿಮಾ ಕಡೆ ತಿರುಗಿಯೂ ನೋಡದ ನಟಿ ರಮ್ಯಾ ಇನ್ನು ಮುಂದೆ ಬಣ್ಣ ಹಚ್ಚಲ್ಲವೇನೋ ಎಂದುಕೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
2019 ರ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುವುದಾಗಿ ಸೂಚನೆ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಶುಭ ಹಾರೈಸಿ ರಮ್ಯಾ ಸುದ್ದಿಯಾಗಿದ್ದರು. ಈ ಶುಭ ಹಾರೈಕೆ ನೋಡಿ ಖುಷ್ ಆಗಿದ್ದ ರಕ್ಷಿತ್, ರಮ್ಯಾಗೆ ನೀವು ಯಾವಾಗ ಚಿತ್ರರಂಗಕ್ಕೆ ಮರಳುತ್ತೀರಿ ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿರುವ ರಮ್ಯಾ 2019 ರ ನಂತರ ಎಂದಿದ್ದಾರೆ. ಹಾಗಾಗಿ 2019 ರ ಲೋಕಸಭೆ ಚುನಾವಣೆ ಆದ ಬಳಿಕ ರಮ್ಯಾ ಸಿನಿಮಾ ಲೋಕಕ್ಕೆ ಮರಳಬಹುದು ಎಂದು ಊಹಿಸಲಾಗಿದೆ. ಆದರೆ ಅವರು ಪಾತ್ರ ಮಾಡುತ್ತಾರಾ, ಅಥವಾ ತೆರೆ ಹಿಂದಿನ ಕೆಲಸ ಮಾಡುತ್ತಾರಾ ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.