Publish Date: Mon, 28 Nov 2016 (15:39 IST)
Updated Date: Mon, 28 Nov 2016 (15:46 IST)
ಒಂದು ಕಾಲದಲ್ಲಿ ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಅನ್ನೋ ತರಹ ಇದ್ದ ರಕ್ಷಿತಾ ಈಗ ಗಜಗಾಮಿನಿಯಂತಾಗಿದ್ದಾರೆ. ರಕ್ಷಿತಾ ಈ ರೀತಿ ಯದ್ವಾತದ್ವಾ ಮೈತೂಕ ಜಾಸ್ತಿ ಆಗಕ್ಕೆ ಕಾರಣ ಏನಿರಬಹುದು ಅಂತ ಜನ ತಲೆಕೆಡಿಸಿಕೊಳ್ಳೋ ಹಂಗಾಗಿದೆ.
ರಕ್ಷಿತಾ ಅವರು ಸ್ಯಾಂಡಲ್‌ವುಡ್ ಚಿತ್ರರಂಗವನ್ನ ತೊರೆದು ಹತ್ತಿರಹತ್ತಿರ ಹತ್ತು ವರ್ಷಗಳಾಗುತ್ತಿವೆ. ಈ ಗ್ಯಾಪಲ್ಲಿ ಅವರ ಮೈತೂಕವೂ ಹೆಚ್ಚಾಗಿದೆ. ಇದಕ್ಕೆ ಕಾರಣ ಇಲ್ಲದೆ ಇಲ್ಲ. ನಟ, ನಿರ್ದೇಶಕ ಪ್ರೇಮ್ ಅವರ ಜೊತೆ ಸಪ್ತಪದಿ ತುಳಿದ ಮೇಲೆ ತಾಯಿಯೂ ಆದರು.
ಆದರೆ ಅವರು ಇನ್ನು ಬಣ್ಣ ಹಚ್ಚಿದ್ದು ಸಾಕು ಅನ್ನಿಸಿದ ಮೇಲೆ ತಮ್ಮ ಮೈತೂಕದ ಕಡೆಗೆ ಅಷ್ಟಾಗಿ ಗಮನಕೊಡಲಿಲ್ಲ. ರಾಜಕೀಯ ಅದೂಇದೂ ಅಂತ ಓಡಾಡಿದ್ರೂ ಪ್ರಯೋಜನವಾಗಲಿಲ್ಲ. ವ್ಯಾಯಾಯ, ಯೋಗ, ತಿನ್ನೋದ್ರ ಕಡೆಗೆ ತಲೆಕೆಡಿಸಿಕೊಳ್ಳಲಿಲ್ಲ. ಹೂವಿನಂತಿದ್ದ ಅವರ ದೇಹ ಬಲೂನಿನಂತಾಯಿತು.
ಸದ್ಯಕ್ಕೆ ಅವರು ಜೀ ಕನ್ನಡದ ’ಕಾಮಿಡಿ ಕಿಲಾಡಿ’ಗಳು ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಕೆಲ ತಿಂಗಳ ಹಿಂದೆ ತಿರುಪತಿಗೆ ಹೋಗಿದ್ದಾಗ, ರಕ್ಷಿತಾರನ್ನು ನೋಡಿದ ಅಲ್ಲಿನ ಜನ ಕಣ್ಣು ಪಿಳಿಪಿಳಿ ಬಿಟ್ಟು ನೋಡಿದ್ರಂತೆ. ಎಲ್ಲೋ ನೋಡಿದ್ದೀವಲ್ಲಾ ಅಂತ ತಲೆಕೆರೆದುಕೊಂಡ ಮೇಲೆ ಅವರಿಗೆ ತುಂಬಾ ತಡವಾಗಿ ರಕ್ಷಿತಾ ಅಂತ ಫ್ಲ್ಯಾಶ್ ಆಯ್ತಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.