Publish Date: Mon, 28 Nov 2016 (15:03 IST)
Updated Date: Mon, 28 Nov 2016 (15:16 IST)
ಇಡೀ ರಾಜ್ಯ ಅಷ್ಟೇ ಅಲ್ಲ ದೇಶವಿದೇಶಗಳ ಜನಮನ ಗೆದ್ದ ಚಿತ್ರ ’ತಿಥಿ’. ಈ ಚಿತ್ರದ ಮೂಲಕ ಗಡ್ಡಪ್ಪ ಮತ್ತು ಸೆಂಚುರಿ ಗೌಡ ದಿನಬೆಳಗಾಗೋದ್ರಲ್ಲಿ ಸೆಲೆಬ್ರಿಟಿಗಳಾದರು. ಅದರಲ್ಲೂ ಗಡ್ಡಪ್ಪನಿಗೆ ಡೋಂಟ್ ಕೇರ್ ಸ್ಟಾರ್ ಎಂಬ ಟೈಟಲನ್ನೂ ಕೊಟ್ರು ಜನ. ಈಗ ಇದೇ ಟೀಂ ಇನ್ನೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ.
ಈ ವರ್ಷ ಏಪ್ರಿಲ್‍ನಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲೆ ವಿಶೇಷ ಸಂಚಲನ ಮೂಡಿಸಿದ “ತಿಥಿ” ಚಿತ್ರ ಕಲಾವಿದರು ಅಭಿನಯಿಸಿರುವ ಮತ್ತೊಂದು ಚಿತ್ರ ಈಗ ತೆರೆಗೆ ಸಿದ್ಧವಾಗಿದೆ. ಜೀವಿತಾ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶಿವ ಎಸ್.ಬಿ. ನಿರ್ಮಿಸಿರುವ “ತರ್ಲೆ ವಿಲೇಜ್” ಚಿತ್ರವು ಯಾವುದೇ ಸದ್ದು ಗದ್ದಲವಿಲ್ಲದೆ ತೆರೆಗೆ ಸಿದ್ದವಾಗಿದ್ದು, ಈ ವಾರದಲ್ಲಿ ಚಿತ್ರವು ಸೆನ್ಸಾರ್ ಮುಂದೆ ಬರಲಿದೆ.
ಚಿತ್ರಕ್ಕೆ ಸಿದ್ದೇಗೌಡ ಕಥೆ, ರಾಮು ನರಹಳ್ಳಿ ಛಾಯಾಗ್ರಹಣ, ವೀರ ಸಮರ್ಥ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ ಪ್ರಕಾಶ್, ಚಿಕ್ಕಪಾಳ್ಯ ಕಲೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ಕೆ.ಎಂ. ರಘು ಹೊತ್ತಿದ್ದಾರೆ. ತಾರಾಗಣದಲ್ಲಿ ಗಡ್ಡಪ್ಪ, ಸೆಂಚುರಿಗೌಡ, ತಮ್ಮಣ್ಣ, ಅಭಿಷೇಕ್, ಹರ್ಷಿತಾ, ಭಾಗ್ಯಶ್ರೀ ಸೋಮು, ರಿಯಲ್ ಕೆಂಚ ರ ಜೊತೆಗೆ 70 ಕಲಾವಿದರು ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.