Publish Date: Sun, 26 Jul 2020 (18:47 IST)
Updated Date: Sun, 26 Jul 2020 (18:50 IST)
ಮಾಡೆಲ್ ಕಂ ನಟಿ ಪೂನಮ್ ಪಾಂಡೆ, ಕೊರೊನಾ ಅಬ್ಬರದ ನಡುವೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತಮ್ಮ ದೀರ್ಘಕಾಲದ ಗೆಳೆಯ ಸ್ಯಾಮ್ ಅಹ್ಮದ್ ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಉಂಗುರಗಳನ್ನು ತೋರಿಸುತ್ತಿರುವ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
"ನಾವು ಅಂತಿಮವಾಗಿ ಇದನ್ನು ಮಾಡಿದ್ದೇವೆ!" ಎಂದು ಚಿತ್ರದಲ್ಲಿ ಸ್ಯಾಮ್ ಬರೆದುಕೊಂಡಿದ್ದಾರೆ. ಕಾಮೆಂಟ್ ಗಳ ವಿಭಾಗದಲ್ಲಿ, ಪೂನಮ್ ಪಾಂಡೆ, “ಅತ್ಯುತ್ತಮ ಭಾವನೆ”ಎಂದು ಸ್ಯಾಮ್ ಗೆ ಪ್ರತಿಕ್ರಿಯಿಸಿದ್ದಾರೆ.
ಪೂನಂ ಪಾಂಡೆ ಅವರ ಅಭಿಮಾನಿಗಳು ನಟಿಗೆ ಶುಭ ಕೋರುತ್ತಿದ್ದಾರೆ.