Publish Date: Mon, 16 May 2022 (10:18 IST)
Updated Date: Mon, 16 May 2022 (10:19 IST)
ಕೋಲ್ಕೊತ್ತಾ: ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೋಲ್ಕೊತ್ತಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ಪ್ರಿಯಕರ ಶಾಗ್ನಿಗ್ ಚಕ್ರವರ್ತಿ ಜೊತೆ ವಾಸವಿದ್ದ ಪಲ್ಲವಿ ಸಾವು ಆತ್ಮಹತ್ಯೆಯಲ್ಲ ಎಂಬುದು ಕುಟುಂಬಸ್ಥರ ಆರೋಪ.
ಪ್ರಿಯಕರ ಹೊರ ಹೋಗಿದ್ದ ವೇಳೆ ಪಲ್ಲವಿ ಸಾವಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.