Select Your Language

Notifications

webdunia
webdunia
webdunia
webdunia

ನಟಿ ನಿಧಿ ಸುಬ್ಬಯ್ಯ ಮದುವೆಗೆ ಮುಹೂರ್ತ ಫಿಕ್ಸ್

webdunia
Bangalore , ಭಾನುವಾರ, 22 ಜನವರಿ 2017 (09:28 IST)
ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ವೀರಬಾಹು, ಅಣ್ಣಾಬಾಂಡ್ ಚಿತ್ರಗಳ ಬೆಡಗಿ ನಿಧಿ ಸುಬ್ಬಯ್ಯ ಅವರಿಗೆ ಮದುವೆ ಫಿಕ್ಸ್ ಆಗಿದೆ. ಗೆಳೆಯ, ಉದ್ಯಮಿ ಲವೇಶ್ ಖೈರಜನಿ ಕೈಹಿಡಿಯುತ್ತಿದ್ದಾರೆ. ತಮ್ಮ ಹುಟ್ಟೂರಾದ ಕೊಡಗಿನಲ್ಲಿ ನಿಧಿ ಮದುವೆ ನೆರವೇರಲಿದೆ.
 
ಮುಂಬೈ ಮೂಲದ ಉದ್ಯಮಿ ಲವೇಶ್ ಜತೆ ಜನವರಿ 1ರಂದು ಉಂಗುರ ತೊಡಿಸಿ ನಿಧಿ ಮದುವೆ ಪ್ರಸ್ತಾಪ ಮಾಡಿದ್ದರು. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 
 
ಇನ್ನು ನಿಧಿ ಸುಬ್ಬಯ್ಯ ವೃತ್ತಿಬದುಕಿನ ವಿಚಾರಕ್ಕೆ ಬಂದರೆ, ಸದ್ಯಕ್ಕೆ 5ಜಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿಯ ಓ ಮೈ ಗಾಡ್, ಅಜಬ್ ಗಜಬ್ ಲವ್, ಡೈರೆಕ್ಟ್ ಇಷ್ಕ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂಡ್ ಮೂಡ್‌ನಿಂದ ಹೊರಬಂದ ರಾಕಿಂಗ್ ಸ್ಟಾರ್