ವಿವಾಹ, ನಿಶ್ಚಿತಾರ್ಥ, ಸಂಬಂಧಗಳ ವಿಚಾರದಲ್ಲಿ ಯಾವತ್ತೂ ಸುದ್ದಿಯಲ್ಲಿರುವವರು ಸಿನಿಮಾ ತಾರೆಗಳು. ಅದ್ಯಾಕೋ ಏನೋ ಗಂಡ ಹೆಂಡತಿ ಅನ್ನೋ ಸಂಬಂಧ ಅವರಿಗೆ ಅಷ್ಟಾಗಿ ಕೂಡಿಬರಲ್ಲ. ಮದುವೆಯಾದ ಸ್ವಲ್ಪ ದಿನಕ್ಕೇ ಸಂಬಂಧಗಳು ಮುರಿದುಬೀಳುತ್ತಿವೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಮೀರಾ ಜಾಸ್ಮಿನ್.
ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿರುವ ಈ ಬೆಡಗಿ ರಾಜೇಶ್ ಎಂಬ ಸಂಗೀತಗಾರನ ಪ್ರೇಮಪಾಶಕ್ಕೆ ಸಿಲುಕಿದ್ದಳು. ಆದರೆ ಆ ಪ್ರೇಮ ವ್ಯವಹಾರ ತುಂಬಾ ದಿನ ನಡೆಯಲಿಲ್ಲ. ಆಮೇಲೆ ಅನಿಲ್ ಜಾನ್ ಎಂಬ ಉದ್ಯಮಿ ತೆಕ್ಕೆಗೆ ಬಿದ್ದಳು. ಅನಿಲ್‌ಗೆ ಅದಾಗಲೇ ಮದುವೆಯಾಗಿತ್ತು.
ಮೀರಾ ಜಾಸ್ಮಿನ್ ಪ್ರೇಮದಲ್ಲಿ ಬಿದ್ದ ಮೇಲೆ ಹೆಂಡತಿಗೆ ಸೋಡಾಚೀಟಿ ಕೊಟ್ಟ. ಇನ್ನೇನು ರೂಟ್ ಕ್ಲಿಯರ್ ಆಯ್ತು ಎಂದುಕೊಂಡು ಇಬ್ಬರೂ ಮದುವೆ ಮುಂದಾದಾಗ ಅನಿಲ್ ಮಾಜಿ ಹೆಂಡತಿಯ ಬಂಧುಗಳು ಮೀರಾ ಮೇಲೆ ದಾಳಿ ಮಾಡಿದರು. ಆಗ ಪೊಲೀಸರ ರಕ್ಷಣೆಯಲ್ಲಿ ಮೀರಾ-ಅನಿಲ್ ಮದುವೆ ನಡೆಯಿತು.
ಇದೀಗ ಇವರಿಬ್ಬರ ಸಂಬಂಧಕ್ಕೂ ತೆರೆಬೀಳುವ ಸಮಯ ಬಂದಿದೆಯಂತೆ. ಮದುವೆಯಾದ ಎರಡು ವರ್ಷಕ್ಕೇ ಇವರಿಬ್ಬರೂ ಬಿಟ್ಟು ಹೋಗಲು ನಿರ್ಧರಿಸಿದ್ದಾರಂತೆ. ಕಳೆದ ಒಂದು ವರ್ಷದಿಂದ ಮೀರಾ ಮತ್ತು ಅನಿಲ್ ಜೊತೆಯಲ್ಲಿಲ್ಲ. ಶೀಘ್ರದಲ್ಲೇ ಕೋರ್ಟ್ ಬಾಗಿಲು ತಟ್ಟಲಿದ್ದಾರೆ ಎನ್ನುತ್ತವೆ ಮೂಲಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.