Publish Date: Wed, 14 Oct 2020 (21:29 IST)
Updated Date: Wed, 14 Oct 2020 (21:30 IST)
ಬಾಲಿವುಡ್ ನ ಹಿರಿಯ ನಟಿ ಮಾಧುರಿ ದೀಕ್ಷಿತ್ ನೆನೆ ಯ ಹೊಸ ಕೆಲಸ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಶೀಘ್ರದಲ್ಲೇ ನಟಿ ಮಾಧುರಿ ದೀಕ್ಷಿತ್ ವೆಬ್ ಸರಣಿಯ ಚೊಚ್ಚಲ ಕೆಲಸವನ್ನು ಪುನರಾರಂಭಿಸಲಿದ್ದಾರೆ ಎನ್ನಲಾಗಿದೆ.
ಮಾಧುರಿ ದೀಕ್ಷಿತ್ ನೆನೆ ತಮ್ಮ ನೆಟ್‌ಫ್ಲಿಕ್ಸ್ ವೆಬ್ ಪ್ರದರ್ಶನಕ್ಕಾಗಿ ಕೆಲಸಕ್ಕೆ ಮರಳಲಿದ್ದು, ಇದನ್ನು ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ರೆಡಿ ಮಾಡಲಿದೆ.
ನಟಿ ತಮ್ಮ ಚೊಚ್ಚಲ ವೆಬ್ ಸರಣಿಗಾಗಿ ಕ್ಯಾಮೆರಾಗಳನ್ನು ಎದುರಿಸಲಿದ್ದಾರೆ. ಕರಣ್ ಜೋಹರ್ ಅವರ ಧರ್ಮಟಿಕ್ ಎಂಟರ್ಟೈನ್ಮೆಂಟ್ ಈ ತಿಂಗಳ ಅಂತ್ಯದ ವೇಳೆಗೆ ನಟಿ ಮಾಧುರಿ ದೀಕ್ಷಿತ್ ಅವರೊಂದಿಗೆ ವೆಬ್ ಶೋ ಚಿತ್ರೀಕರಣವನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.