Select Your Language

Notifications

webdunia
webdunia
webdunia
webdunia

ತನ್ನ ಲವ್ ಸ್ಟೋರಿ ನೆನೆದ ಖುಷ್ಬೂ ಸುಂದರ್

ತನ್ನ ಲವ್ ಸ್ಟೋರಿ ನೆನೆದ ಖುಷ್ಬೂ ಸುಂದರ್
Chennai , ಗುರುವಾರ, 23 ಫೆಬ್ರವರಿ 2017 (11:41 IST)
ಸ್ಯಾಂಡಲ್‌ವುಡ್‌ನಲ್ಲಿ 80-90ರ ದಶಕದಲ್ಲಿ ಮನೆಮಾತಾಗಿದ್ದ ತಾರೆ ಖುಷ್ಬೂ. ಅಂದಚೆಂದ, ಒಳ್ಳೆಯ ಅಭಿನಯದ ಮೂಲಕ ಒಂದು ಕಾಲದಲ್ಲಿ ಹೀರೋಯಿನ್ ಆಗಿ ಮಿಂಚಿದವರು. ಈಗ ತಮ್ಮ ಲವ್ ಸ್ಟೋರಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜ್ಞಾಪಿಸಿಕೊಂಡಿದ್ದಾರೆ. 
 
ಸುಮಾರು 22 ವರ್ಷಗಳ ಹಿಂದೆ ತೆಗೆದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಸಂದರ್ಭವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. "22 ವರ್ಷಗಳ ಹಿಂದೆ ಫೆಬ್ರವರಿ 22ರಂದು ನಾನು ಮುರೈಮಮನ್ ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಆ ಸಮಯದಲ್ಲಿ ಅವರು ನನಗೆ ಪ್ರಪೋಸ್ ಮಾಡಿದರು. ಇಬ್ಬರ ಪ್ರಯಾಣ ಹಾಗೆ ಆರಂಭವಾಯಿತು" ಎಂದಿದ್ದಾರೆ ಖುಷ್ಬೂ.
 
2001ರಲ್ಲಿ ಖುಷ್ಬೂ ಮತ್ತು ಸಿ ಸುಂದರ್ ಮದುವೆ ನಡೆಯಿತು. ಇವರಿಗೆ ಆವಂತಿಕಾ, ಆನಂದಿತಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸದ್ಯಕ್ಕೆ ಖುಷ್ಬೂ ಒಂದು ತಮಿಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪವನ್ ಕಲ್ಯಾಣ್-ತ್ರಿವಿಕ್ರಮ್ ಕಾಂಬಿನೇಷನಲ್ಲಿ ಬರುತ್ತಿರುವ ಇನ್ನೊಂದು ಚಿತ್ರದಲ್ಲಿ ಖುಷ್ಬೂ ಅವರದು ಪ್ರಮುಖ ಪಾತ್ರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆ ಸಿನಿಮಾವನ್ನು ಮೂರು ಬಾರಿ ತೆಗೆದರಂತೆ!