Select Your Language

Notifications

webdunia
webdunia
webdunia
webdunia

ಆ ಸಿನಿಮಾವನ್ನು ಮೂರು ಬಾರಿ ತೆಗೆದರಂತೆ!

ಆ ಸಿನಿಮಾವನ್ನು ಮೂರು ಬಾರಿ ತೆಗೆದರಂತೆ!
Mumbai , ಗುರುವಾರ, 23 ಫೆಬ್ರವರಿ 2017 (11:37 IST)
ಬಾಲಿವುಡ್ ಹೀರೋ ಗೋವಿಂದಾ 90ರ ದಶಕದಲ್ಲಿ ಬೆಳ್ಳಿತೆರೆಯ ಮೇಲೆ ಮಿಂಚಿದವರು. ಅವರ ಕಾಮಿಡಿ ಟೈಮಿಂಗ್, ಎನರ್ಜಿಗೆ ಬೆರಗಾಗದ ಪ್ರೇಕ್ಷಕರಿರಲಿಲ್ಲ. ಆದರೆ ರಾಜಕೀಯಕ್ಕೆ ಅಡಿಯಿಟ್ಟ ಬಳಿಕ ಸಿನಿಮಾಗಳಿಂದ ದೂರ ಸರಿದರು. ಸುಮಾರು ಹತ್ತು ವರ್ಷಗಳ ಬಳಿಕ ’ಆಗಯಾ ಹೀರೋ’ ಚಿತ್ರದ ಮೂಲಕ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ.
 
ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆದರೆ 2014ರಲ್ಲಿ ಶೂಟಿಂಗ್ ಮುಗಿದಾಗ ಯಾಕೆ ತಡವಾಯಿತು ಎಂದು ಕೇಳಿದ್ದಕ್ಕೆ...ಸಂದರ್ಶನವೊಂದರಲ್ಲಿ ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ ಗೋವಿಂದಾ. ಆಗಯಾ ಹೀರೋ ಚಿತ್ರ 2014ರಲ್ಲಿ ಅಭಿನಯ್ ಚಕ್ರ ಹೆಸರಿನಲ್ಲಿ ಸೆಟ್ಟೇರಿತ್ತು. ಆದರೆ ಬಿಡುಗಡೆಯಾಗಲಿಲ್ಲ.
 
ಈ ಚಿತ್ರವನ್ನು ಮೂರು ಬಾರಿ ತೆಗೆದಿದ್ದೇವೆ. ಯಾಕೆಂದರೆ..ಕಥೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಹಾಗಾಗಿ ಮತ್ತೆಮತ್ತೆ ಆ ಚಿತ್ರದಲ್ಲಿ ಅಭಿನಯಿಸಿದೆ. ಮೊದಲು ಚಿತ್ರೀಕರಿಸಿದಾಗ ಹಾಡುಗಳು ಬೇಕಾಗಿಲ್ಲ ಎಂದುಕೊಂಡೆವು. ಆದರೆ ಹಾಡುಗಳು ಸಿನಿಮಾದ ಮುಖ್ಯಭಾಗ. ಹಾಗಾಗಿ ಮತ್ತೆ ಹಾಡುಗಳನ್ನು ಚಿತ್ರೀಕರಿಸಿದೆವು. ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕಾಯಿತು.
 
ಪ್ರೇಕ್ಷಕರು ಈ ಚಿತ್ರವನ್ನು ಹಳೆ ಚಿತ್ರದಂತೆ ಭಾವಿಸಬಹುದು. ಶಾರುಖ್ ಅಭಿನಯಿಸಿರುವ ರಯೀಸ್ ಸಹ ಮೂರು ವರ್ಷಗಳ ಹಿಂದಿನ ಚಿತ್ರ. ಕಹಾನಿ ಸಹ ತೆರೆಗೆ ತಂದ ಬಹಳ ಕಾಲದ ನಂತರ ಬಿಡುಗಡೆಯಾಯಿತು. ಆದರೂ ಯಶಸ್ಸು ಸಾಧಿಸಿತು. ಆ ರೀತಿಯ ಸಿನಿಮಾಗಳು ಬಹಳಷ್ಟಿವೆ ಎಂದಿದ್ದಾರೆ ಗೋವಿಂದ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಹೆಬ್ಬುಲಿ’ ನಾಯಕಿ ಅಮಲಾ ಪೌಲ್‌ಗೆ ವಿಚ್ಛೇದನ ಮಂಜೂರು