Select Your Language

Notifications

webdunia
webdunia
webdunia
webdunia

ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ಪ್ರಕರಣ: ಸಂಕಷ್ಟದಲ್ಲಿ ಮಲಯಾಳಂ ಸ್ಟಾರ್ ನಟ?

ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ಪ್ರಕರಣ: ಸಂಕಷ್ಟದಲ್ಲಿ ಮಲಯಾಳಂ ಸ್ಟಾರ್ ನಟ?
Kocchi , ಬುಧವಾರ, 5 ಜುಲೈ 2017 (10:38 IST)
ಕೊಚ್ಚಿ: ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಹೆಸರು ಮಾಡಿದ್ದ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸ್ಟಾರ್ ನಟ ದಿಲೀಪ್ ಸಂಕಷ್ಟ ಎದುರಿಸುವಂತಾಗಿದೆ.


ಮೊನ್ನೆಯಷ್ಟೇ ತನಿಖಾ ತಂಡ ದಿಲೀಪ್ ರನ್ನು ಪ್ರಶ್ನೆ ಮಾಡಿತ್ತು. ಇದೀಗ ಮತ್ತಷ್ಟು ಸಾಕ್ಷ್ಯ ಸಿಕ್ಕಿದ ಬೆನ್ನಲ್ಲೇ ವಿಚಾರಣೆಗೊಳಪಡಿಸಲು ಸಿದ್ಧವಾಗಿದೆ. ಈ ಹಿನ್ನಲೆಯಲ್ಲಿ ಬಂಧನ ಭೀತಿಯಲ್ಲಿರುವ ನಟ ದಿಲೀಪ್ ಮತ್ತು ಸ್ನೇಹಿತ್ ನಾದಿರ್ ಶಾ ಕೇರಳ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖ ಆರೋಪಿ ಪಲ್ಸರ್ ಸುನಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ದೃಢಪಟ್ಟಿದೆ. ಈತ ಜೈಲಿನಿಂದಲೇ ದಿಲೀಪ್ ಮ್ಯಾನೇಜರ್ ಅಪ್ಪುಣ್ಣಿ ಮತ್ತು ನಾದಿರ್ ಶಾಗೆ ಕರೆ ಮಾಡಿದ್ದು ತನಿಖೆಯಿಂದ ಬಹಿರಂಗವಾಗಿದೆ. ಈ ಹಿನ್ನಲೆಯಲ್ಲಿ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ರ ನಿವಾಸ ಮತ್ತು ಜವಳಿ ಅಂಗಡಿಗೆ ತೆರಳಿ ಪೊಲೀಸರು ತನಿಖೆ ನಡೆಸಿದ್ದಾರೆಂದು ಕೆಲವು ಮಲಯಾಳಂ ಮಾಧ್ಯಮಗಳಲ್ಲಿ ಹೇಳಲಾಗಿದೆ.

ಈ ಪ್ರಕರಣದಲ್ಲಿ ಆರೋಪಿ ದಿಲೀಪ್ ನಿಕಟವರ್ತಿಗಳ ಜತೆ ಸಂಪರ್ಕ ಸಾಧಿಸುವುದರಿಂದ ನಟನ ಕೈವಾಡವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಇದನ್ನು ದಿಲೀಪ್ ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಬಗ್ಗೆ ಬಾಯ್ಬಿಟ್ಟ ಗೌತಮಿ