Select Your Language

Notifications

webdunia
webdunia
webdunia
webdunia

ಸಿನಿಮಾದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಬಗ್ಗೆ ಬಾಯ್ಬಿಟ್ಟ ಗೌತಮಿ

ಸಿನಿಮಾದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಬಗ್ಗೆ ಬಾಯ್ಬಿಟ್ಟ ಗೌತಮಿ
ಚೆನ್ನೈ , ಮಂಗಳವಾರ, 4 ಜುಲೈ 2017 (20:49 IST)
90ರ ದಶಕದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಗೌತಮಿ. ಕಮಲ್ ಹಾಸನ್ ಜೊತೆಗಿನ 13 ವರ್ಷಗಳ ಲಿವ್ ಇನ್ ಟುಗೆದರ್`ಗೆ ಗುಡ್ ಬೈ ಹೇಳುವ ಮೂಲಕ ಇತ್ತೀಚೆಗೆ ಗೌತಮಿ ಸುದ್ದಿಗೆ ಗ್ರಾಸವಾಗಿದ್ದರು.

ಇದೀಗ, ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಜೀವನದಲ್ಲಿ ಯಾವುದೇ ಸಂಬಂಧವಾದರೂ ಅದು ನಮ್ಮ ಬದ್ಧತೆ ಮೇಲೆ ನಿರ್ಧಾರವಾಗುತ್ತದೆ. ಸಂಪ್ರದಾಯ ಅಥವಾ ಸಂಪ್ರದಾಯ ವಿರೋಧ ಎಂದು ಪರಿಗಣಿಸುವಂತಿಲ್ಲ. ಮದುವೆ ಇರಲಿ, ಶಿಕ್ಷಕ-ವಿದ್ಯಾರ್ಥಿ, ಸಹೋದರ-ಸಹೋದರಿ, ಪೋಷಕರು-ಮಕ್ಕಳು, ಸಹ ಕೆಲಸಗಾರರು ಎಲ್ಲವೂ ನಮ್ಮ ಬದ್ಧತೆ ಮೇಲೆ ನಿರ್ಧಾರವಾಗುತ್ತದೆ.  ನೀವು ಲಿವ್ ಇನ್ ಟುಗೆದರ್ ಅನ್ನಿ, ಮದುವೆ ಅನ್ನಿ ಅಲ್ಲಿ ಬದ್ಧತೆ ಇಲ್ಲದಿದ್ದರೆ ಸಂಬಂಧಗಳು ಇರುವುದಿಲ್ಲ ಎಂದಿದ್ದಾರೆ.

ಚಿತ್ರರಂಗದಲ್ಲಿ ಇದೇ ಎನ್ನಲಾಗುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಉತ್ತರಿಸಿದ ಗೌತಮಿ, ಕ್ಯಾಸ್ಟಿಂಗ್ ಕೌಚ್ ಎಲ್ಲ ಕಡೆ ಇದೆ. ಕೇವಲ ಚಿತ್ರರಂಗದಲ್ಲಷ್ಟೇ ಅಲ್ಲ.  ಕ್ಯಾಸ್ಟಿಂಗ್ ಕೌಚ್ ವೈಯಕ್ತಿಕ ಆಯ್ಕೆ. ಕೆಲವು ಗುರಿಗಳನ್ನ ತಲುಪಲು ಕೆಲವೊಂದನ್ನ ಮಾಡಲೇಬೇಕು. ಕೆಲವರು ಆ ರೀತಿ ಬದುಕುತ್ತಿದ್ದರೆ. ಆ ದೃಷ್ಟಿಯಿಂದ ಅವರ ಯೋಗ್ಯತೆ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಬೆಡಗಿ ಈಗ ಇನ್ನಷ್ಟು ಹಾಟ್: ಟಾಪ್ ಲೆಸ್ ಪೋಸ್ ನಲ್ಲಿ ಜಾಕ್ವೆಲೀನ್