Webdunia - Bharat's app for daily news and videos

Install App

ಸ್ಯಾಂಡಲ್ ವುಡ್ ನಲ್ಲಿ ಮೀ ಟು ಅನುಭವ ಬಿಚ್ಚಿಟ್ಟ ನಟಿ ಆಶಿತಾ

Webdunia
ಶನಿವಾರ, 17 ಸೆಪ್ಟಂಬರ್ 2022 (10:00 IST)
ಬೆಂಗಳೂರು: ಬಾಲಿವುಡ್, ಟಾಲಿವುಡ್ ನಲ್ಲಿದ್ದ ಮೀ ಟು ಆರೋಪಗಳು ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದೆ. ನಟಿ ಆಶಿತಾ ಸ್ಯಾಂಡಲ್ ವುಡ್ ನಲ್ಲಿ ತಮಗಾದ ಮೀ ಟು ಅನುಭವದಿಂದ ಚಿತ್ರರಂಗದಿಂದಲೇ ದೂರವಾದ ವಿಚಾರವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ರಘುರಾಮ್ ಅವರ ಜೊತೆಗಿನ ಯೂ ಟ್ಯೂಬ್ ಸಂದರ್ಶನದಲ್ಲಿ ನಟಿ ಆಶಿತಾ ಸ್ಯಾಂಡಲ್  ವುಡ್ ನಲ್ಲಿ ಅವಕಾಶಕ್ಕಾಗಿ ಮಂಚಕ್ಕೆ ಕರೆಯುವ ಅನುಭವ ತನಗಾಗಿತ್ತು. ಅವರ ಆಸೆ ತೀರಿಸಿದರೆ ಮಾತ್ರ ಅವಕಾಶ ಕೊಡುವುದಾಗಿ ಆಮಿಷವೊಡ್ಡಿದ್ದಾಗಿ ಆಶಿತಾ ಹೇಳಿಕೊಂಡಿದ್ದಾರೆ.

ಇದೇ ಕಾರಣಕ್ಕೆ ಚಿತ್ರರಂಗದಿಂದಲೇ ದೂರವಾಗುವ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ. ಬಾ ಬಾ ಬಾರೋ ರಸಿಕ, ರೋಡ್ ರೋಮಿಯೋ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದ ಆಶಿತಾ ಬಳಿಕ ಚಿತ್ರರಂಗದಿಂದಲೇ ದೂರವಾದರು. 2005 ರ ನಂತರ ಸಿನಿಮೇತರ ಮಂದಿ ನಿರ್ಮಾಪಕರಾದಾಗ ಅವರು ಬೇರೆ ರೀತಿ ಡಿಮ್ಯಾಂಡ್ ಮಾಡಲು ಶುರು ಮಾಡಿದರು. ಆಗ ಬೇಸರವಾಯಿತು. ಈ ಸವಾಲುಗಳನ್ನು ನನಗೆ ಎದುರಿಸಲು ಸಾಧ‍್ಯವಾಗಲಿಲ್ಲ ಎಂದು ಆಶಿತಾ ಹೇಳಿದರು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments