Publish Date: Mon, 08 Apr 2024 (13:53 IST)
Updated Date: Mon, 08 Apr 2024 (13:55 IST)
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿಸಿದಷ್ಟು ಹಣ ಗಳಿಸಿಲ್ಲ. ಹೀಗಾಗಿ ಚಿತ್ರದ ಬಗ್ಗೆ ಆನ್ ಲೈನ್ ತಾಣಗಳಲ್ಲಿ ನೆಗೆಟಿವ್ ರಿವ್ಯೂ ಕಂಡುಬರುತ್ತಿದೆ. ಹೀಗಾಗಿ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿಜಯ್ ದೇವರಕೊಂಡ ಟೀಂ ಸೈಬರ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಚಿತ್ರದ ಬಗ್ಗೆ ನೆಗೆಟಿವ್ ವರದಿಗಳನ್ನು ನೀಡುತ್ತಿರುವುದರಿಂದ ಗಳಿಕೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಇಂತಹ ಸುದ್ದಿಗಳು ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ವಿಜಯ್ ತಂಡ ದೂರಿನಲ್ಲಿ ಹೇಳಿದೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಸಿನಿಮಾ ಫ್ಯಾಮಿಲಿ ಸ್ಟಾರ್ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ. ವಿಜಯ್ ನಟನೆ ಚೆನ್ನಾಗಿಲ್ಲ. ಅವರು ಆಯ್ಕೆ ಮಾಡುವ ಕತೆಗಳು ಒಂದೇ ತರ ಇರುತ್ತವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿತ್ತು. ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ವಿಜಯ್ ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ಅಭಿನಯಿಸಿದ್ದಾರೆ.