ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ಗೆ ಕೊಲೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಮುಂಬೈ ಪೊಲೀಸರು ಮಂಗಳವಾರ ಛತ್ತೀಸ್ಗಢದ ರಾಯ್ಪುರದ ವಕೀಲರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವಾರ ಬಾಲಿವುಡ್ ಕಿಂಗ್ ಖಾನ್ಗೆ 50ಲಕ್ಷ ಹಣದ ಬೇಡಿಕೆಯಿಟ್ಟು ಜೀವಬೆದರಿಕೆ ಹಾಕಿದ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ರಾಯ್ಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಫೈಜಾನ್ ಖಾನ್ (42) ವಶಕ್ಕೆ ಪಡೆದಿದ್ದಾರೆ.
ಕಳೆದ ಮಂಗಳವಾರ ಶಾರುಖ್ ಖಾನ್ ಅವರಿಗೆ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಫೈಜಾನ್ ಅವರಿಗೆ ಸಮನ್ಸ್ ನೀಡಿದ್ದರು, ಆದರೆ ಅವರು ಹಾಜರಾಗಲು ವಿಫಲರಾಗಿದ್ದರು.
ಮುಂಬೈ ಮತ್ತು ರಾಯ್ಪುರ ಪೊಲೀಸರು ಶಾರುಖ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿದ ಆರೋಪಿಯ ಉದ್ದೇಶವನ್ನು ಬಹಿರಂಗಪಡಿಸಿಲ್ಲ.
ಕಳೆದ ಮಂಗಳವಾರ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಹಿಂದೂಸ್ತಾನಿ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು, ಬಾಂದ್ರಾದಲ್ಲಿರುವ ಶಾರುಖ್ ಅವರ ಮನೆ ಮನ್ನತ್ ಹೊರಗೆ ನಿಂತಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ತನಗೆ 50 ಲಕ್ಷ ಹಣ ನೀಡಿದಿದ್ದರೆ ಶಾರುಖ್ ಖಾನ್ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ.