Select Your Language

Notifications

webdunia
webdunia
webdunia
webdunia

Video: ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಿಡಿಗೇಡಿಗೆ ಬುದ್ಧಿವಾದ ಹೇಳಿದ ನಟ ಸಂಜು ಬಸಯ್ಯ

Sanju Basaiah

Krishnaveni K

ಬೆಂಗಳೂರು , ಶುಕ್ರವಾರ, 11 ಜುಲೈ 2025 (15:19 IST)
Photo Credit: Instagram
ಬೆಂಗಳೂರು: ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆಸಿ ಪೊಲೀಸರ ಸಮ್ಮುಖದಲ್ಲೇ ಹಾಸ್ಯ ನಟ ಸಂಜು ಬಸಯ್ಯ ಬುದ್ಧಿವಾದ ಹೇಳಿ ಮಾದರಿಯಾಗಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಪತ್ನಿ ಪಲ್ಲವಿಗೆ ಸೋಷಿಯಲ್ ಮೀಡಿಯಾದಲ್ಲಿ ಯುವಕನೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದ. ಆದರೆ ಸಂಜು ಬಸಯ್ಯ ತಾಳ್ಮೆ ಕಳೆದುಕೊಳ್ಳಲಿಲ್ಲ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಳಿಕ ಆರೋಪಿ ಯುವಕ ಮನೋಜ್ ಎಂಬಾತನನ್ನು ಠಾಣೆಗೆ ಕರೆಸಲಾಯಿತು. ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ನಟ ಸಂಜು ಬಸಯ್ಯ ಬುದ್ಧಿವಾದ ಹೇಳಿದ್ದಾರೆ. ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿದ್ದನ್ನು ನಾವು ಗಮನಿಸುತ್ತಿರುತ್ತೀವಿ ಎನ್ನುವುದು ನಿಮ್ಮ ತಲೆಯಿಲ್ಲರಿಲಿ. ನಮಗೂ ಜೀವನ ಇರುತ್ತದೆ. ಹೀಗಾಗಿ ನೀವೂ ಅರಿವಿಟ್ಟುಕೊಂಡು ಸಂದೇಶ ಕಳುಹಿಸಿ ಎಂದು ಸಂಜು ಬಸಯ್ಯ ಹೇಳಿದ್ದಾರೆ.

ಈ ಘಟನೆ ಮೂಲಕ ನಟ ಸಂಜು ಬಸಯ್ಯ ನಟ ದರ್ಶನ್ ಗೇ ಮಾದರಿಯಾಗಿದ್ದಾರೆ. ಕಳೆದ ವರ್ಷ ನಟ ದರ್ಶನ್ ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿ ಎಂಬಾತನನ್ನು ಕರೆಸಿ ಹಲ್ಲೆ ನಡೆಸಿದ್ದರ ಪರಿಣಾಮ ಆತ ಕೊಲೆಯಾಗಿದ್ದ ಎಂಬ ಆರೋಪವಿದೆ. ಆಗಲೂ ಎಷ್ಟೋ ಜನ ನಟ ದರ್ಶನ್  ಆ ರೀತಿ ಮಾಡುವುದರ ಬದಲು ತಮಗಿರುವ ಪ್ರಭಾವ ಬಳಸಿ ಇದೇ ರೀತಿ ಪೊಲೀಸರ ಸಮ್ಮುಖದಲ್ಲಿ ಬುದ್ಧಿವಾದ ಹೇಳಬಹುದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಧಾರವಾಹಿಗೆ ಬಂದ ಬ್ರೋ ಗೌಡ