Publish Date: Sat, 29 Jul 2017 (18:03 IST)
Updated Date: Sat, 29 Jul 2017 (18:08 IST)
ದರ್ಶನ್ ಸಿನಿಮಾದಲ್ಲಿ ಬಿಲ್ಡಪ್ ಜಾಸ್ತಿ ಇರುತ್ತೆ ಎಂಬ ಹೇಳಿಕೆ ನೀಡಿ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ್ದ ನಟಿ ಸಂಜನಾ, ಅವರಿಗೆ ನೋವಾಗಿದ್ದರೆ ದರ್ಶನ್ ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ನಿರೂಪಕ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿದ್ದೇನೆ. ಇದರಲ್ಲಿ ಯಾರ ಮನಸ್ಸು ನೋಯಿಸುವ ಉದ್ದೇಶವಿರಲಿಲ್ಲ ಎಂದು ತಿಳಿಸಿದ್ದಾರೆ
ನನ್ನ ಮಾತುಗಳಿಂದ ಬೇಸರವಾಗಿದ್ದರೆ ದರ್ಶನ್ ಹಾಗೂ ಅವರ ಅಭಿಮಾನಿಗಳ ಕ್ಷಮೆಕೋರುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿದ್ದ ಸಂಜನಾ, ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಅದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿ ದರ್ಶನ್ ಅಭಿಮಾನಿಗಳ ಆಕ್ರೋಶ್ಕೆ ಗುರಿಯಾಗಿದ್ದರು.
ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದ ನಟಿ ರಶ್ಮಿಕಾ ಮಂದಣ್ಣ, ಕೂಡಾ ಯಶ್ ಶೋ ಆಪ್ ಮಾಡುತ್ತಾರೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದನ್ನು ಸ್ಮರಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.