ಲೈಂಗಿಕ ಕಿರುಕುಳದ ಆರೋಪ ನಿರಾಕರಿಸಿದ ನಟ ಜಯಸೂರ್ಯ: ಕಾನೂನು ಹೋರಾಟದ ಎಚ್ಚರಿಕೆ

Sampriya
ಭಾನುವಾರ, 1 ಸೆಪ್ಟಂಬರ್ 2024 (12:59 IST)
Photo Courtesy X
ತಿರುವನಂತಪುರ: ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ. ಆದರೆ, ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು  ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮಾಲಿವುಡ್‌ ನಟ ಜಯಸೂರ್ಯ ಪ್ರತಿಕ್ರಿಯಿಸಿದ್ದಾರೆ.

ನಟಿಯರ ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳನ್ನು ನಿರಾಕರಿಸಿರುವ ಅವರು ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಸುಳ್ಳು ಆರೋಪಗಳು ನನ್ನ ಮತ್ತು ನನ್ನ ಕುಟುಂಬವನ್ನು ಘಾಸಿಗೊಳಿಸಿವೆ ಎಂದು ಹೇಳಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಎರಡು ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಈ ಆರೋಪಗಳನ್ನು ಕಾನೂನು ಬದ್ಧವಾಗಿಯೇ ಎದುರಿಸುತ್ತೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಆತ್ಮಸಾಕ್ಷಿ ಇಲ್ಲದವರು ಯಾರ ಮೇಲಾದರೂ ಸುಳ್ಳು ಆರೋಪ ಮಾಡಬಹುದು. ಅದು ತುಂಬಾ ಸುಲಭ. ಆದರೆ, ಕಿರುಕುಳದ ಸುಳ್ಳು ಆರೋಪವನ್ನು ಎದುರಿಸುವುದು ಕಿರುಕುಳದಷ್ಟೇ ನೋವುಂಟು ಮಾಡುತ್ತದೆ. ಎಂದು ಹೇಳಿದ್ದಾರೆ.

ಸದ್ಯ ಜಯಸೂರ್ಯ ಮತ್ತು ಅವರ ಕುಟುಂಬ ಅಮೆರಿಕದಲ್ಲಿದ್ದು, ಅಲ್ಲಿಂದ ಹಿಂತಿರುಗಿದ ತಕ್ಷಣ ಕಾನೂನು ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಇಂದು ನನ್ನ ಜನ್ಮದಿನ. ನನಗೆ ಶುಭ ಕೋರಿದ, ಬೆಂಬಲ ನೀಡಿ ನನ್ನೊಂದಿಗೆ ನಿಂತಿರುವ ಎಲ್ಲರಿಗೂ ಧನ್ಯವಾದಗಳು. ಹುಟ್ಟುಹಬ್ಬವನ್ನು ಅತ್ಯಂತ ನೋವಿನಿಂದ ಆಚರಿಸಲು ಸಹಕರಿಸಿದವರಿಗೂ ಧನ್ಯವಾದಗಳು. ಪಾಪ ಮಾಡದವರು ಕಲ್ಲು ಎಸೆಯಲಿ, ಆದರೆ ಅದು ಮಾಡಿದವರ ಮೇಲೆ ಎಸೆಯಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಜಯಸೂರ್ಯ ವಿರುದ್ಧ ನಟಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಕೇಳಿಬಂದಿದ್ದವು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ