Webdunia - Bharat's app for daily news and videos

Install App

ನಟಿ ರಮ್ಯಾಗೆ ಟಾಂಗ್ ಕೊಟ್ಟು, ಯಡಿಯೂರಪ್ಪ ಸಮರ್ಥಿಸಿದ ನಟ ಜಗ್ಗೇಶ್

Webdunia
ಶುಕ್ರವಾರ, 1 ಮಾರ್ಚ್ 2019 (09:28 IST)
ಬೆಂಗಳೂರು: ಸರ್ಜಿಕಲ್ ಸ್ಟ್ರೈಕ್ ವಿಚಾರವಾಗಿ ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ ನಟಿ, ಕಾಂಗ್ರೆಸ್ ನಾಯಕಿ ರಮ್ಯಾಗೆ ನಟ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ.


ಇನ್ನೊಂದೆಡೆ ಸರ್ಜಿಕಲ್ ಸ್ಟ್ರೈಕ್ ನಿಂದ ಬಿಜೆಪಿ ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲುವುದು ಗ್ಯಾರಂಟಿ ಎಂಬರ್ಥದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಜಗ್ಗೇಶ್ ಸಮರ್ಥಿಸಿದ್ದಾರೆ.

ಮೊದಲು ರಮ್ಯಾಗೆ ಪರೋಕ್ಷವಾಗಿ ಟಾಂಗ್ ನೀಡಿದ ಜಗ್ಗೇಶ್ ‘ದೇಶ ಮೆಚ್ಚುವ ನರೇಂದ್ರ ಮೋದಿ ನಿರ್ಣಯಕ್ಕೆ ಕಂಗಾಲಾಗಿದ್ದು, ಸಮಯ ಸಾಧಕರು. ದೇಶ ಸೈನಿಕ ಪಾಕ್ ಸೆರೆ ಸಿಕ್ಕಾಗ ವಿಷಯ ಸಿಕ್ತು ಮೋದಿ ವಿರುದ್ಧ ಮಾತನಾಡಲು ಎಂದು ಎದ್ದರು. ಅದರಲ್ಲಿ ನಮ್ಮ ನೆಲದ ಅನ್ನ ತಿಂದು ನಮ್ಮ ಕನ್ನಡ ಜನ ಚಪ್ಪಾಳೆ ಪಡೆದು ಜೀವನ ಕಂಡ ಮಹನೀಯಳಂತು ಮಾತನಾಡಲು ಅವಕಾಶ ಸಿಕ್ಕಿತು ಎಂದು ವ್ಯರ್ಥ ಮಾತು ಶುರುವಿಟ್ಟುಕೊಂಡಿದ್ದಾಳೆ! ಸಮಯ ಸಾಧಕಿ’ ಎಂದು ರಮ್ಯಾಗೆ ಜಗ್ಗೇಶ್ ಜರೆದಿದ್ದಾರೆ.

ಇನ್ನು, ತಮ್ಮ ಮಾತು ವಿವಾದವಾಗುತ್ತಿದ್ದಂತೆ, ನಾನು ಹೇಳಿದ್ದು, ಬಿಜೆಪಿ 22 ಸ್ಥಾನ ಗೆಲ್ಲುತ್ತದೆ ಎಂದು ಹೊರತು, ಸರ್ಜಿಕಲ್ ದಾಳಿಯಿಂದ ಗೆಲ್ಲುತ್ತದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಯಡಿಯೂರಪ್ಪ ನೀಡಿದ ಸ್ಪಷ್ಟನೆಯನ್ನೂ ಸಮರ್ಥಿಸಿಕೊಂಡಿರುವ ಜಗ್ಗೇಶ್, ಹೇಳಲು ವಿಷಯವಿಲ್ಲದ ಅಪ್ರಬುದ್ಧರು ಅಸತ್ಯ ವೈರಲ್ ಮಾಡಿ ವಿಕೃತ ಆನಂದ ಅನುಭವಿಸುವರು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಬಾಸ್ ಫ್ಯಾನ್ಸ್ ರಮ್ಯಾ ಕದನಕ್ಕೆ ಶಿವಣ್ಣನ ಎಂಟ್ರಿ, ಹೇಳಿದ್ದೇನು ಗೊತ್ತಾ

ಡಿ ಕಂಪನಿ ಅಲ್ಲ ಥೂ.. ಡುಬಾಕ್, ದಾವೂದ್ ಕಂಪನಿ ಅದು: ಡಿಬಾಸ್ ಫ್ಯಾನ್ಸ್ ವಿರುದ್ಧ ರೊಚ್ಚಿಗೆದ್ದ ಪ್ರಥಮ್

ರಮ್ಯಾ ಕಂಪ್ಲೇಂಟ್ ಬೆನ್ನಲ್ಲೇ ಚುರುಕಾದ ಪೊಲೀಸರು: ಡಿಬಾಸ್ ಫ್ಯಾನ್ಸ್ ಅಕೌಂಟ್ ಗೆ ಗುನ್ನ

ಸು ಫ್ರಮ್ ಸೋ ಮೂವಿ ಬಜೆಟ್ ಎಷ್ಟಿತ್ತು, ಗಳಿಸಿದ್ದೆಷ್ಟು ನೋಡಿದರೆ ಅಚ್ಚರಿಯಾಗ್ತೀರಿ

ಫಸ್ಟ್ ಟೈಂ ರಿಯಾಲಿಟಿ ಶೋ ಜಡ್ಜ್ ಆಗಿ ಅಮೂಲ್ಯ: ಬೆಸ್ಟ್ ಆಯ್ಕೆ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments