Select Your Language

Notifications

webdunia
webdunia
webdunia
webdunia

ಹಾಟ್ ದೃಶ್ಯದ ಶೂಟಿಂಗ್ ವೇಳೆ ಜಯಪ್ರದಾರನ್ನು ಬಿಗಿಯಾಗಿ ತಬ್ಬಿಕೊಂಡಿದ್ದರಂತೆ ನಟ ದಿಲೀಪ್ ತಾಹೀಲ್

ಹಾಟ್ ದೃಶ್ಯದ ಶೂಟಿಂಗ್ ವೇಳೆ ಜಯಪ್ರದಾರನ್ನು ಬಿಗಿಯಾಗಿ ತಬ್ಬಿಕೊಂಡಿದ್ದರಂತೆ ನಟ ದಿಲೀಪ್ ತಾಹೀಲ್
ಬೆಂಗಳೂರು , ಶನಿವಾರ, 8 ಸೆಪ್ಟಂಬರ್ 2018 (06:35 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್ ಅವರ ಜೊತೆ ನಟಿಸಿದ ನಟಿ ಜಯಪ್ರದಾ ಅವರು ಬಾಲಿವುಡ್ನಲ್ಲಿ ಯೂ ಸಾಕಷ್ಟು ಹೆಸರು ಗಳಿಸಿದ್ದರು. ಇವರು ತನ್ನ ಮೂರು ದಶಕಗಳ ಸಿನಿ ವೃತ್ತಿಜೀವನದಲ್ಲಿ 200 ಕ್ಕಿಂತ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಒಮ್ಮೆ ಶೂಟಿಂಗ್ ನ ವೇಳೆ ನಟ ದಿಲೀಪ್ ತಾಹಿಲ್ ಅವರು ಇವರ ಜೊತೆ ನಡೆದುಕೊಂಡ ರೀತಿ ಈಗಲೂ ಭಯ ಹುಟ್ಟಿಸುವುದರ ಜೊತೆಗೆ ಬೇಸರವನ್ನುಂಟುಮಾಡುತ್ತದೆಯಂತೆ.


ಹೌದು ಒಮ್ಮೆ ನಟ ದಿಲೀಪ್ ತಾಹಿಲ್ ಜೊತೆಗೆ ಹಾಟ್ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆಯಿತಂತೆ. ಶೂಟಿಂಗ್ ಆರಂಭವಾದಾಗ ನಟ ದಿಲೀಪ್ ತನ್ನ ನಿಯಂತ್ರಣವನ್ನು ಕಳೆದುಕೊಂಡು ನಟಿ ಜಯಪ್ರದಾರನ್ನು ಗಟ್ಟಿಯಾಗಿ ಹಿಡಿದುಕೊಂಡರಂತೆ. ಆವೇಳೆ ಅವರ ಹಿಡಿತದಿಂದ ಬಿಡಿಸಿಕೊಳ್ಳಲಾಗದೆ ನೋವು ಅನುಭವಿಸಿದ ನಟಿ ಜಯಪ್ರದಾ ದಿಲೀಪ್ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ನೂಕಿದ್ದರು. ಕೋಪದಿಂದ 'ದಿಲೀಪ್ ಇದು ರಿಯಲ್ ಅಲ್ಲ. ರೀಲ್. ಎಚ್ಚರದಿಂದ ನಟಿಸಿ' ಅಂತಾ ಜೋರಾಗಿ ಕಪಾಳಮೋಕ್ಷ ಮಾಡಿದ್ದರಂತೆ.


ಈ ಘಟನೆ ನನಗೆ ಉಸಿರುಗಟ್ಟಿಸುವ ರೀತಿಯಂತಿತ್ತು. ಈ ಘಟನೆಯನ್ನು ನೆನೆಸಿಕೊಂಡರೆ ಈಗಲೂ ನನಗೆ ಭಯವಾಗುತ್ತದೆ ಎಂದು ನಟಿ ಜಯಪ್ರದಾ  ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ನಿಶ್ಚಿತಾರ್ಥ ಕುರಿತು ನಿಕ್ ಮಾಜಿ ಪ್ರೇಯಸಿ ಹೇಳಿದ್ದೇನು?