Publish Date: Sat, 15 Jul 2017 (13:05 IST)
Updated Date: Sat, 15 Jul 2017 (13:09 IST)
ಕೊಚ್ಚಿ: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ವಿರುದ್ಧ ಪೊಲೀಸರು ಮತ್ತೊಂದು ಆರೋಪ ಮಾಡಿದ್ದಾರೆ. ಪಲ್ಸರ್ ಸುನಿ ಚಿತ್ರೀಕರಿಸಿದ ಮೊಬೈಲ್ ಫೋನ್ ದಿಲೀಪ್ ವಶದಲ್ಲಿರುವುದಾಗಿ ಪೊಲೀಸ್ ಮೂಲಗಳು ಹೇಳಿರುವುದಾಗಿ ಮಲಯಾಳಂ ವಾಹಿನಿಗಳು ವರದಿ ಮಾಡಿವೆ.
ನಟಿಗೆ ಕಿರುಕುಳ ನೀಡುವ ವಿಡಿಯೋ ಮಾಡಿದ್ದ ಮೊಬೈಲ್ ಫೋನ್ ನನ್ನು ಆರೋಪಿ ಸುನಿಲ್ ಕುಮಾರ್ ದಿಲೀಪ್ ವಶಕ್ಕೆ ನೀಡಿರುವುದಾಗಿ ಈ ಮೊದಲೇ ಹೇಳಿದ್ದ. ಇದೀಗ ಪೊಲೀಸರಿಗೆ ಪಲ್ಸರ್ ಸುನಿ ಈ ಮೊಬೈಲ್ ನ್ನು ವಕೀಲ ಪ್ರತೀಶ್ ಚಾಕೋ ಮುಖಾಂತರ ದಿಲೀಪ್ ಗೆ ಹಸ್ತಾಂರಿಸಿದ್ದರು ಎಂದು ತಿಳಿದು ಬಂದಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ.
ಹೀಗಾಗಿ ಪೊಲೀಸರು ದಿಲೀಪ್ ರನ್ನು ಮತ್ತಷ್ಟು ದಿನ ತಮ್ಮ ವಶಕ್ಕೊಪ್ಪಿಸಲು ನ್ಯಾಯಾಲಯದಲ್ಲಿ ಮನವಿ ಮಾಡಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಳ್ಳಲಿದ್ದು, ದಿಲೀಪ್ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ