ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

Sampriya
ಶುಕ್ರವಾರ, 31 ಅಕ್ಟೋಬರ್ 2025 (14:30 IST)
Photo Credit X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ದರ್ಶನ್‌ ಅವರ ಹಿಂದಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ದರ್ಶನ್ ಹಾಗೂ ಪವಿತ್ರಾ, ವಧು ವರರ ರೀತಿಯ ಉಡುಗೆಯಲ್ಲಿ ಕಾಣಿಸಿಕೊಂಡಿರುವುದನ್ನು ನೋಡಬಹುದು. 

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈ ಹಿಂದೆಯೂ ಪವಿತ್ರಾ ಗೌಡ, ದರ್ಶನ್‌ ಜತೆಗಿನ 10 ವರ್ಷದ ಸಂಬಂಧದ ಬಗ್ಗೆ ಫೋಟೋಗಳನ್ನು ಹಂಚಿಕೊಂಡಾಗ ಅದಕ್ಕೆ ಕೌಂಟರ್ ನೀಡಿದ್ದರು.ಅದಲ್ಲದೆ ರೇಣುಕಾಸ್ವಾಮಿ ಪ್ರರಕಣದಲ್ಲೂ ಪವಿತ್ರಾ ಗೌಡಳನ್ನು ಪತ್ನಿ ಎಂದು ಹೇಳಿದಾಗ ಅದಕ್ಕೆ ಪತ್ರವನ್ನು ಬರೆದಿದ್ದರು. ದರ್ಶನ್‌ಗೆ ನಾನೊಬ್ಬಳೇ ಪತ್ನಿ ಎಂದು ವಿಜಯಲಕ್ಷ್ಮಿ ಹೇಳಿದ್ದರು. 

ಇದೀಗ ಪ್ರಾಥಮಿಕವಾಗಿ ಲೀಕ್ ಮಾಡಿದ ಫೋಟೋಗಳು ಎನ್ನಲಾಗುತ್ತಿದ್ದು, ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯದ್ದು ಅನ್ನೋದನ್ನ ಬಿಂಬಿಸಲು ಲೀಕ್ ಮಾಡಿರುವ ಫೋಟೋಗಳಂತೆ ಕಾಣುತ್ತಿದೆ.

ವೈರಲ್ ಆಗುತ್ತಿರುವ ಪೋಟೋದಲ್ಲಿ ಪವಿತ್ರಾ ಹಾಗೂ ದರ್ಶನ್ ಬಿಳಿಯ ರೇಷ್ಮೆ ವಸ್ತ್ರದಲ್ಲಿ ವಧು-ವರರ ಅವತಾರದಲ್ಲಿದ್ದಾರೆ. ಪವಿತ್ರಾ ಕತ್ತಲ್ಲಿ ಅರಿಶಿಣ ದಾರದ ಮಾಂಗಲ್ಯ ಕಾಣುತ್ತದೆ. ಕೆನ್ನೆಗೆ ಅರಿಶಿಣ ಹಚ್ಚಿದ್ದಾರೆ, ಹಣೆಗೆ ಕುಂಕುಮವಿಟ್ಟಿದ್ದಾರೆ. ಹಾಗೆಯೇ ದರ್ಶನ್ ಹಣೆಯಲ್ಲೂ ಕುಂಕುಮವಿದ್ದು, ಇಬ್ಬರು ಅನ್ಯೋನ್ಯವಾಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಇದೆಲ್ಲವೂ 10 ವರ್ಷಗಳ ಹಿಂದಿನ ಫೋಟೋಗಳು ಎನ್ನುವಂತೆ ಕಾಣುತ್ತಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಪ್ರಕರಣದ ಸಂಬಂಧ ಟ್ರಯಲ್ ಶುರುವಾಗುತ್ತಿರುವ ಈ ಹೊತ್ತಲ್ಲಿ ಸೋಶಿಯಲ್ ಮದುವೆಯದ್ದು ಎನ್ನಲಾದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಲಾಗಿದೆ. 

ಇವು ಎಐ ಫೋಟೋಗಳು ಎಂದೂ ಚರ್ಚೆಗಳು ಶುರುವಾಗಿದೆ. ತನಿಖೆಯ ಬಳಿಕವೇ ಸತ್ಯಾಸತ್ಯತೆ ಬಯಲಾಗಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments