Webdunia - Bharat's app for daily news and videos

Install App

ಮಾಧ್ಯಮದವರ ಮೇಲೆ ಕಿಡಿಕಾರಿದ ನಟ ದರ್ಶನ್

Webdunia
ಭಾನುವಾರ, 30 ಸೆಪ್ಟಂಬರ್ 2018 (08:39 IST)
ಮೈಸೂರು : ಕಾರು ಅಪಘಾತಕ್ಕೀಡಾಗಿ ನಗರದ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಟ ದರ್ಶನ್ ಶನಿವಾರ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೇ ಎದುರಿಗಿದ್ದ ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ನಟ ದರ್ಶನ್, ‘ಆಸ್ಪತ್ರೆಯಲ್ಲಿ ಇದ್ದಕೊಂಡು ನಾನು ಎಲ್ಲ ನ್ಯೂಸ್ ಚಾನೆಲ್‍ಗಳನ್ನು ನೋಡಿದ್ದೇನೆ. ಊಹಾಪೋಹಗಳ ಮೇಲೆ ನೀವೇ ಎಲ್ಲವನ್ನೂ ನಿರ್ಧಾರ ಮಾಡಿಬಿಟ್ಟರೆ ಹೇಗೆ? ಕಾರಿನಲ್ಲಿ ಯುವತಿಯೊಬ್ಬರು ಇದ್ದರು ಅಂತ ವರದಿ ಮಾಡಿದ್ದೀರಿ. ಒಬ್ಬರಲ್ಲ ನಾಲ್ವರು ನನ್ನ ತೊಡೆಯ ಮೇಲೆ ಕುಳಿತಿದ್ದರು’ ಎಂದು ಕಿಡಿಕಾರಿದ್ದಾರೆ
ಅಲ್ಲದೇ ನನ್ನ ಗಾಡಿಯಲ್ಲಿ ಇರುವುದೇ ನಾಲ್ಕು ಸೀಟ್, ಹೀಗಾಗಿ ನಾಲ್ಕು ಜನ ಮಾತ್ರ ಇದ್ದೇವು. ಆದರೆ ಐವರು ಇದ್ದರು ಅಂತಾ ಹೇಳುವುದು ಸರಿಯಲ್ಲ’ ಎಂದು ಹೇಳಿದ್ದಾರೆ.


ಹಾಗೇ ಕಾರು ಸ್ಥಳಾಂತರ ಕುರಿತು ಪ್ರತಿಕ್ರಿಯೆ ನೀಡಿದ ದರ್ಶನ್, ಅಪಘಾತದ ಸ್ಥಳದಲ್ಲಿಯೇ ಕಾರು ಬಿಟ್ಟು ಹೋಗಿದ್ದರೆ ಸಂಚಾರಕ್ಕೆ ಅಡತಡೆ ಆಗುತ್ತಿತ್ತು. ಜೊತೆಗೆ ಅದು ಅಪರಾಧ ಕೂಡಾ. ಹೀಗಾಗಿ ಕಾರನ್ನು ಬೇರೆ ಕಡೆಗೆ ಸಾಗಿಸಲಾಯಿತು. ಇದು ತಪ್ಪಾ, ಕಾರು ಡಿಕ್ಕಿ ಹೊಡೆದಿದ್ದಕ್ಕೆ ಕಂಬ ಬಿದ್ದಿಲ್ಲ. ಅದು ಮೊದಲೇ ಬಿದ್ದಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಗೆ ಮುಂದೆ ಎಲ್ಲಿ ಜೈಲೂಟ, ಇಂದು ನಿರ್ಧಾರ

ಮೈಸೂರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್

ಟಾಕ್ಸಿಕ್ ಬಳಿಕ ಮತ್ತೊಂದು ಬಿಗ್ ಸ್ಟಾರ್ ಸಿನಿಮಾಗೆ ನಾಯಕಿಯಾದ ರುಕ್ಮಿಣಿ ವಸಂತ್

ದಿಡೀರ್ ಆಗಿ ಅಭಿಮಾನಿಗಳಿಗೆ ಒಂದು ಮೆಸೇಜ್ ಕೊಟ್ಟ ರಾಜ್ ಬಿ ಶೆಟ್ಟಿ

ವಿಷ್ಣುವರ್ಧನ್ ಇರುವ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು: ವಿವಾದಕ್ಕೆ ಟ್ವಿಸ್ಟ್

ಮುಂದಿನ ಸುದ್ದಿ
Show comments