Select Your Language

Notifications

webdunia
webdunia
webdunia
webdunia

ಲೈಂಗಿಕ ದೌರ್ಜನ್ಯ ಎಸಗಿ ಹಣಕ್ಕೆ ಬೇಡಿಕೆ: ನಟ ಚರಿತ್ ಬಾಳಪ್ಪ ಅರೆಸ್ಟ್‌

Sexual Abuse Case, Actor Chatith Balappa, MudduLakshmi Serial Actor Charith Balappa

Sampriya

ಬೆಂಗಳೂರು , ಭಾನುವಾರ, 16 ಫೆಬ್ರವರಿ 2025 (12:52 IST)
Photo Courtesy X
ಬೆಂಗಳೂರು:  ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪದಡಿಯಲ್ಲಿ  ಸೀರಿಯಲ್ ನಟ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.  ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ಚರಿತ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇವರು ಕನ್ನಡದಲ್ಲಿ ಮುದ್ದುಲಕ್ಷ್ಮಿ ಸೀರಿಯಲ್ ಸೇರಿದಂತೆ ತೆಲುಗು ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದಾರೆ. ಪರಿಚಯವಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ವಾಸವಿದ್ದ ಮನೆಗೆ ನುಗ್ಗಿ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾರೆ.  ದೂರು ಆಧರಿಸಿ ಪೊಲೀಸರು ನಟನನ್ನು ಬಂದಿದ್ದಾರೆ.

ಯುವತಿಗೆ ಲೈಂಗಿಕ ದೌರ್ಜನ್ಯ ಎಸಗುವುದಲ್ಲದೆ ಹಣಕ್ಕೂ ಬೇಡಿಕೆ ಇಟ್ಟಿದ್ದಾನೆ ಎಂದು ಚರಿತ್ ಬಾಳಪ್ಪ ವಿರುದ್ಧ ಆರೋಪ ಮಾಡಲಾಗಿದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಎಲ್ಲ ದೂರುಗಳನ್ನು ಆಧರಿಸಿ ಚರಿತ್ ಬಾಳಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ, ಹಲ್ಲೆ ಮುಂತಾದ ಕೇಸ್ ದಾಖಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪತ್ನಿಯಿಂದ ಚರಿತ್ ಬಾಳಪ್ಪ ಡಿವೋರ್ಸ್ ಪಡೆದಿದ್ದಾರೆ. ಈ ಹಿಂದೆ ಚರಿತ್ ಬಾಳಪ್ಪ ವಿರುದ್ದವೇ ಪತ್ನಿ ಮಂಜುಶ್ರೀ ಕೂಡ ದೂರು ನೀಡಿದ್ದರು.

ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಪತ್ನಿಗೆ ಚರಿತ್ ಬಾಳಪ್ಪ ಬೆದರಿಕೆ ಹಾಕಿದ್ದರು. ಆ ಕುರಿತು 2024ರ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ ಎನ್​ಸಿಆರ್​ ದಾಖಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ತಾಳಿ ಕಟ್ಟುವಾಗ ಪುರೋಹಿತರು ಕೇಳಿದ ಪ್ರಶ್ನೆಗೆ ನಟ ಧನಂಜಯ್‌ಗೆ ನಗುವೋ ನಗು