Webdunia - Bharat's app for daily news and videos

Install App

ಪವಿತ್ರಾ ಜಯರಾಂ ಜೊತೆ ಚಂದ್ರುಗೆ ಸಂಬಂಧವಿತ್ತು: ಪತ್ನಿ ಶಿಲ್ಪಾ ಆರೋಪ

Krishnaveni K
ಶನಿವಾರ, 18 ಮೇ 2024 (15:29 IST)
ಹೈದರಾಬಾದ್: ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟಿ ಪವಿತ್ರಾ ಜಯರಾಂ ಅವರ ಗೆಳೆಯ, ನಟ ಚಂದ್ರಕಾಂತ್ ನಿನ್ನೆ ನೇಣಿಗೆ ಶರಣಾಗಿದ್ದಾರೆ. ಇದೀಗ ಪವಿತ್ರಾ ಬಗ್ಗೆ ಚಂದ್ರಕಾಂತ್ ಪತ್ನಿ, ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಪವಿತ್ರಾ ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪುವಾಗ ಚಂದ್ರಕಾಂತ್ ಕೂಡಾ ಜೊತೆಯಲ್ಲಿದ್ದರು. ಚಂದ್ರಕಾಂತ್ ಗೆ ಗಂಭೀರ ಗಾಯವಾಗಿದ್ದು ನೋಡಿ ಗಾಬರಿಯಲ್ಲಿ ಪವಿತ್ರಾ ಕೊನೆಯುಸಿರೆಳೆದಿದ್ದರು. ಆದರೆ ಚಂದ್ರಕಾಂತ್ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಪವಿತ್ರಾ ಮುಂದೆ ಆತನನ್ನೇ ಮದುವೆಯಾಗುವ ಯೋಜನೆಯಲ್ಲಿದ್ದರು ಎನ್ನಲಾಗಿತ್ತು.

ಆದರೆ ಅಸಲಿ ವಿಷಯ ಬೇರೆಯೇ ಇದೆ. ಚಂದ್ರಕಾಂತ್ ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚಂದ್ರಕಾಂತ್ ಸಾವನ್ನಪ್ಪಿದ ಬಳಿಕ ಈಗ ಪತ್ನಿ ಶಿಲ್ಪಾ ಪತಿ ಮತ್ತು ಪವಿತ್ರಾ ಜಯರಾಂ ಬಗ್ಗೆ ಆಪಾದನೆ ಮಾಡಿದ್ದಾರೆ. ನನ್ನ ಪತಿ ನನ್ನಿಂದ ದೂರವಾಗಲು ಪವಿತ್ರಾಳೇ ಕಾರಣ ಎಂದಿದ್ದಾರೆ.

‘ಇಬ್ಬರ ಸಂಬಂಧ ನನಗೆ ಗೊತ್ತಾದಾಗ ಪ್ರಶ್ನಿಸಿದ್ದೆ. ಬಳಿಕ ನನಗೆ ಹೊಡೆಯುವುದು, ಕುಡಿದು ಬಂದು ಗಲಾಟೆ ಮಾಡುವುದು ಮಾಡುತ್ತಿದ್ದ. ಯಾವತ್ತೂ ಪವಿತ್ರಾ ಫೋಟೋ ನೋಡುತ್ತಲೇ ಇರುತ್ತಿದ್ದ. ಚಂದ್ರು ನನ್ನ ಹಾಗೂ ಮಕ್ಕಳ ಜವಾಬ್ಧಾರಿ ತೆಗೆದುಕೊಳ್ಳಲಿಲ್ಲ. ನಾನೇ ಮಕ್ಕಳ ಜವಾಬ್ಧಾರಿ ತೆಗೆದುಕೊಂಡು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದೇನೆ. ನಾನು ಯಾರ ಜೊತೆ ಮಾತನಾಡಿದರೂ ಚಂದ್ರು ಸಂಬಂಧ ಕಟ್ಟುತ್ತಿದ್ದ. ಒಮ್ಮೆ ಪವಿತ್ರಾ ನೇರವಾಗಿ ನನಗೆ ಕರೆ ಮಾಡಿ ಅವನು ನನ್ನ ಗಂಡ, ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಧಮ್ಕಿ ಹಾಕಿದ್ದಳು. ಈ ವಿಚಾರ ಪವಿತ್ರಾ ಮಕ್ಕಳಿಗೂ ಗೊತ್ತಿತ್ತು. ಅವಳ ಮಗನಿಗೆ ಹೇಳಿದಾಗ ಅವರಿಬ್ಬರ ವಿಚಾರಕ್ಕೆ ನಾನು ತಲೆ ಹಾಕಲ್ಲ ಎಂದಿದ್ದ’ ಎಂದಿದ್ದಾರೆ.

ಚಂದ್ರಕಾಂತ್ ತಾಯಿ ಕೂಡಾ ಪವಿತ್ರಾ ಬಗ್ಗೆ ಆಪಾದನೆ ಹೊರಿಸಿದ್ದಾರೆ. ಇಷ್ಟೆಕ್ಕೆಲ್ಲಾ ಪವಿತ್ರಾಳೇ ಕಾರಣ. ನಮ್ಮ ಮಗನನ್ನು ನಮ್ಮಿಂದ ದೂರ ಮಾಡಿದ್ದಳು. ನನಗೆ ಎಲ್ಲವೂ ಪವಿತ್ರಾ, ಆಕೆಯೇ ನನ್ನ ಹೆಂಡತಿ ಎನ್ನುತ್ತಿದ್ದ. ಮನೆಗೆ ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಪವಿತ್ರಾ ಸಹವಾಸ ಬಿಡು ಎಂದು ಸಾಕಷ್ಟು ಹೇಳಿದರೂ ನಮ್ಮ ಮಾತು ಕೇಳುತ್ತಿರಲಿಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ನಿರೂಪಕಿ ಅನುಶ್ರೀ ಎಷ್ಟೊಂದು ಸಿಂಪಲ್‌, ಮದುವೆ ಸೀರೆ ಬಗ್ಗೆ ಕೊಟ್ರು ಬಿಗ್‌ ಅಪ್ಡೇಟ್‌

Amrithadhare serial: ಅಮೃತಧಾರೆಯಲ್ಲಿ ಮಹಾ ತಿರುವು, ಕನ್ನಡದಲ್ಲಿ ಅಪರೂಪಕ್ಕೆ ನಡೆಯುತ್ತಿದೆ ಇಂಥಾ ಟ್ವಿಸ್ಟ್

ಖ್ಯಾತ ಕಿರುತೆರೆ ನಟ ಆಶಿಶ್ ಕಪೂರ್ ಮೇಲೆ ಇದೆಂಥಾ ಆರೋಪ, ಜೈಲು ಸೇರುವ ಪರಿಸ್ಥಿತಿ ಹಾಕೆ ಬಂತು

ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ

ನಾನು ಸ್ವಲ್ಪ ಸ್ಲೋ ಎನಿಸಬಹುದು ಆದ್ರೆ.. ರಕ್ಷಿತ್ ಶೆಟ್ಟಿ ಹೇಳಿದ ಮಾತು ನೋಡಿ video

ಮುಂದಿನ ಸುದ್ದಿ