Select Your Language

Notifications

webdunia
webdunia
webdunia
webdunia

ನಟ ಆರ್ಯ ಸಿನಿಮಾದ ಖ್ಯಾತ ಸ್ಟಂಟ್‌ಮ್ಯಾನ್‌ ರಾಜು ನಿಧನ

ಕಾಲಿವುಡ್ ಸ್ಟಂಟ್ ಮಾಸ್ಟರ್ ರಾಜು

Sampriya

ಚೆನ್ನೈ , ಭಾನುವಾರ, 13 ಜುಲೈ 2025 (20:22 IST)
Photo Credit X
ಚೆನ್ನೈ:  ಸಿನಿಮಾ ಚಿತ್ರೀಕರಣದ ಸಮಯದಲ್ಲಿ  ಖ್ಯಾತ ಸ್ಟಂಟ್‌ಮ್ಯಾನ್‌ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.  ಸ್ಟಂಟ್‌ಮ್ಯಾನ್‌ ರಾಜು ಭಾನುವಾರ (ಜು.13) ಮುಂಜಾನೆ ಚಿತ್ರೀಕರಣದ ಸೆಟ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾಲಿವುಡ್‌ನ ಖ್ಯಾತ ನಿರ್ದೇಶಕ ಪಾ ರಂಜಿತ್‌ ನಟ ಆರ್ಯ ಅವರ ಸಿನಿಮಾದ ಸೆಟ್‌ನಲ್ಲಿ ಕಾರು ಸ್ಟಂಟ್‌  ಮಾಡುವ ಸಂದರ್ಭದಲ್ಲಿ ಅವಘಡ ಸಂಭವಿಸಿ ರಾಜು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ರಾಜು ಅವರ ಮೃತಪಟ್ಟ ಸುದ್ದಿಯನ್ನು ಕಾಲಿವುಡ್‌ ನಟ ವಿಶಾಲ್‌ ಅವರು ಹಂಚಿಕೊಂಡಿದ್ದಾರೆ.

ರಾಜು ಕಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸ್ಟಂಟ್‌ಮ್ಯಾನ್‌ ಆಗಿ ಕೆಲಸ ಮಾಡಿದ್ದರು. ಕಾರು ಸ್ಟಂಟ್‌ಗಳನ್ನು ಮಾಡುವುದರಲ್ಲಿ ಅವರು ಖ್ಯಾತಿಯಾಗಿದ್ದರು.

ಹಲವಾರು ವರ್ಷಗಳಿಂದ ಹತ್ತಾರು ಸಿನಿಮಾಗಳಿಗೆ ಅವರು ಸ್ಟಂಟ್‌ಮ್ಯಾನ್‌ ಆಗಿ ಕೆಲಸ ಮಾಡಿದ್ದರು. ರಾಜು ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡುವ ಭರವಸೆಯನ್ನು ನಟ ವಿಶಾಲ್‌ ನೀಡಿದ್ದಾರೆ.

ನಟ ವಿಶಾಲ್‌, ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್ ಸಿಲ್ವಾ ಸೇರಿದಂತೆ ಹಲವರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ಘಟನೆಯ ಬಗ್ಗೆ ನಟ ಆರ್ಯ ಅಥವಾ ನಿರ್ದೇಶಕ ಪಾ ರಂಜಿತ್ ಅಧಿಕೃತ ಹೇಳಿಕೆ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳತನ ಶಂಕೆ: ಬಿಗ್‌ಬಾಸ್‌ ಖ್ಯಾತಿಯ ಅಬ್ದು ರೋಜಿಕ್ ಅರೆಸ್ಟ್‌