Webdunia - Bharat's app for daily news and videos

Install App

ಬೆಂಗಳೂರಿನ ಕಸ ಸಮಸ್ಯೆಗೆ ಬಿಬಿಎಂಪಿಗೆ ಸಲಹೆ ನೀಡಿದ ನಟ ಅನಿರುದ್ಧ್

Webdunia
ಭಾನುವಾರ, 5 ಜೂನ್ 2022 (09:10 IST)
ಬೆಂಗಳೂರು: ಕಸ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳ ಕಳಿ ವ್ಯಕ್ತಪಡಿಸುವ ನಟ ಅನಿರುದ್ಧ್ ಈಗ ಬೆಂಗಳೂರಿನ ಕಸ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಮುಂದೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ನಟ ಅನಿರುದ್ಧ್ ಅವರನ್ನು ಭೇಟಿ ಮಾಡಿ ಸಲಹೆ ಕೇಳಿದೆ. ಈ ಸಂದರ್ಭದಲ್ಲಿ ಕೆಲವು ಅಂಶಗಳ ಸಲಹೆಯನ್ನು ಅವರು ನೀಡಿದ್ದಾರೆ. ಅವರು ನೀಡಿದ ಸಲಹೆಗಳು ಹೀಗಿವೆ:

  1. ಘನತ್ಯಾಜ್ಯ ನಿರ್ವಹಣೆ, ಸುರಕ್ಷತೆ, ಹಸಿರು ಹೊದಿಕೆಯ ಹೆಚ್ಚಳ ಮತ್ತು ಆರೋಗ್ಯ, ನೈರ್ಮಲ್ಯ ವಿಚಾರಗಳಿಗಾಗಿ ತಜ್ಞರ ಸಮಿತಿ ರಚಿಸುವುದು.
  2. ಪ್ರತಿ ವಾರ್ಡ್ ನಲ್ಲೂ ವಸ್ತು ಸ್ಥಿತಿ ಮೇಲೆ ಕಣ್ಣಿಡಲು ಅಧಿಕಾರಿಗಳು, ಸೇವಾ ಪ್ರತಿನಿಧಿಗಳು, ನಾಗರಿಕರನ್ನೊಳಗೊಂಡ ಸಮಿತಿ ರಚಿಸುವುದು.
  3. ನಾಗರಿಕರು ನೇರವಾಗಿ ಸಂಪರ್ಕಿಸಲು ಝೋನಲ್ ಮಾರ್ಷಲ್ ಗಳು,ಅಧಿಕಾರಿಗಳ ಸಂಖ್ಯೆಗಳನ್ನು ರಸ್ತೆ ನಾಮಫಲಕಗಳ ಮೇಲೆ ಬರೆಯುವುದು.
ಇದಲ್ಲದೇ ನಟ ಅನಿರುದ್ಧ್ ನೀಡಿದ ಇತರ ಸಲಹೆಗಳು:
  1. ಘನತ್ಯಾಜ್ಯ ನಿರ್ವಹಣೆಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸುವುದು.
  2. ಆಯಾ ವಾರ್ಡ್‍ ಗಳಲ್ಲಿ ಕಂಪೋಸ್ಟ್ ಗಳನ್ನಿಟ್ಟುಕೊಂಡು ತ್ಯಾಜ್ಯ ಸಂಗ್ರಹ ಕಂಪೋಸ್ಟರ್ ಗಳಿಗೆ ಹೋಗುವಂತೆ ನೋಡಿಕೊಳ್ಳುವುದು.
  3. ಮೂಲದಲ್ಲಿಯೇ ತ್ಯಾಜ್ಯ ಬೇರ್ಪಡಿಸುವಂತೆ ನೋಡಿಕೊಳ್ಳುವುದು.
  4. ತ್ಯಾಜ್ಯ ಸಾಗಿಸಲು ಮುಚ್ಚಿದ, ಯೋಗ್ಯ ವಾಹನಗಳ ಬಳಕೆ ಮಾಡುವುದು.
  5. ಹೋಟೆಲ್, ಛತ್ರಗಳ ಬಳಿ ನವೀನ ಮಾದರಿಯ ಕಸದ ತೊಟ್ಟಿಗಳನ್ನಿಡುವುದು.
  6. ದಿನಕ್ಕೆ ಮೂರು ಸಲ ಬೇರೆ ಬೇರೆ ಸಮಯದಲ್ಲಿ ಕಸ ಸಂಗ್ರಹಣೆಗೆ ಕ್ರಮ ಕೈಗೊಳ್ಳಬೇಕು.
  7. ವಾರ್ಡ್ ಸ್ವಚ್ಛವಾಗಿಟ್ಟುಕೊಂಡ ಪೌರ ಕಾರ್ಮಿಕರಿಗೆ ಬಹುಮಾನ ಕೊಡಬೇಕು.
  8. ಸುಲಭ ಶೌಚಾಲಯಗಳನ್ನು ನಿರ್ಮಿಸಿ, ಅವುಗಳ ನಿರ್ವಹಣೆ ಮಾಡಬೇಕು.
  9. ಮಹಾಪೂರ ತಡೆಯಲು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಒತ್ತುವರಿಗಳನ್ನು ತೆರವುಗೊಳಿಸಬೇಕು. ಸಾಧ‍್ಯವಾದರೆ ಕಾಲುವೆಗಳ ಮೇಲೆ ಗುಜರಾತ್ ಮಾದರಿಯಂತೆ ಸೋಲಾರ್ ಪ್ಯಾನೆಲ್ ಗಳನ್ನು ಒದಗಿಸಬಹುದು.
  10. ಯಲ್ಚೇನಹಳ್ಳಿ, ಕನಕಪುರ ರಸ್ತೆ ಮೈದಾನವನ್ನು ಸ್ವಚ್ಛಗೊಳಿಸುವುದು.
ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳು:
  1. ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ತೂಗಾಡುವ ತಂತಿ, ಕೇಬಲ್ ಗಳನ್ನು ನೆಲದೊಳಗೆ ಸೇರಿಸುವುದು. ಈ ಪರಿಸ್ಥಿತಿಗೆ ಕಾರಣವಾದ ಅಧಿಕಾರಿಗಳು, ಕೇಬಲ್ ಆಪರೇಟರ್ ಗಳಿಗೆ ದಂಡ ವಿಧಿಸಬೇಕು.
  2. ಸುರಕ್ಷತೆಗೆ ಆದ್ಯತೆ ಕೊಟ್ಟು ಟ್ರಾನ್ಸ್ ಫಾರಂಗಳನ್ನು ಮಾಡಬೇಕು.
  3. ರಸ್ತೆಯಲ್ಲಿ ಅಡ್ಡಾಡುವ ದನಗಳಿಗೆ ಗೋಶಾಲೆಗಳಿಗೆ ಸಾಗಿಸಲು ವ್ಯವಸ್ಥೆ.
  4. ಪ್ರಾಣಿ ದಯಾ ಸಂಘಗಳ ನೆರವಿನೊಂದಿಗೆ ಬೀದಿ ನಾಯಿ ಸಮಸ್ಯೆ ನಿವಾರಿಸುವುದು.
  5. ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗಗಳು, ಮೋರಿ ನಿರ್ವಹಣೆಗೆ ತಜ್ಞರ ಸಲಹೆ ಪಡೆದು ವೈಜ್ಞಾನಿಕ ವಿನ್ಯಾಸದ ಅನುಸಾರವಾಗಿ ರಚಿಸುವುದು.
  6. ಸಿಸಿಟಿವಿ ಅಳವಡಿಕೆ
  7. ಒತ್ತುವರಿ ಪಾದಚಾರಿ ಮಾರ್ಗಗಳ ತೆರವು.
  8. ರಸ್ತೆ ಕಾಮಗಾರಿ ಪೂರ್ತಿ ಮಾಡುವುದು.
ಸೌಂದರ್ಯೀಕರಣ ಮತ್ತು ಹಸಿರು ಹೊದಿಕೆ
  1. ಜಾಹೀರಾತು, ಪೋಸ್ಟರ್ ಅಳವಡಿಕೆಗೆ ನಿಷೇಧ. ಬದಲಾಗಿ ನಿರ್ದಿಷ್ಟ ಶುಲ್ಕಕ್ಕೆ ಡಿಜಿಟಲ್ ಫಲಕ ಒದಗಿಸುವುದು.
  2. ಮರಗಳಿಗೆ ಮೊಳೆ, ಕಂಬಿ ಹೊಡೆಯುವುದಕ್ಕೆ ಕಡಿವಾಣ ಹಾಗೂ ದಂಡ ವಿಧಿಸುವುದು.
  3. ರಸ್ತೆ ವಿಭಜಕಗಳ ನಡುವೆ ಮರ/ಗಿಡ ನೆಟ್ಟು ನೀರಿನ ಸೌಲಭ್ಯ ಒದಗಿಸುವುದು.
  4. ಖಾಲಿ ಇರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸುವುದು.
  5. ಲಾಲ್ ಭಾಗ್ ನ ಕಂಪೌಂಡ್ ಗೋಡೆ ತೆಗೆದು ಎಂಎಸ್ ಗ್ರಿಲ್ ಗಳನ್ನು ಅಳವಡಿಸಿ ಜನರಿಗೆ ಚೆನ್ನಾಗಿ ಕಾಣುವಂತೆ ಮಾಡುವುದು.
ಕೆರೆಗಳ ಪುಜರುಜ್ಜೀವನ:
  1. ಕೆರೆಗಳು ತ್ಯಾಜ್ಯ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು.
  2. ಕೆರೆಗಳ ಸುತ್ತ ಗ್ರಿಲ್ ಅಳವಡಿಸಬೇಕು.
  3. ಕೆರೆಗಳನ್ನು ಸ್ವಚ್ಛಗೊಳಿಸಿ, ಸುಂದರವನ್ನಾಗಿ ಮಾಡಿದ ಮೇಲೆ ಅವುಗಳ ನಿರ್ವಹಣಾ ವೆಚ್ಚಕ್ಕೆ ಆದಾಯ ಗಳಿಸಲು ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆಗಳಾದ ಬೋಟಿಂಗ್, ಪಾದಚಾರಿ ಪಥ, ಪಾರ್ಕ್, ಮತ್ತು ಉಪಹಾರ ಗೃಹಗಳನ್ನು ತೆರೆಯುವುದು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments