Publish Date: Tue, 13 Dec 2016 (09:28 IST)
Updated Date: Tue, 13 Dec 2016 (09:32 IST)
ಬೆಂಗಳೂರು: ಅದ್ಯಾಕೋ ಲೂಸ್ ಮಾದ ಯೋಗಿ ಎಂತೆಂತಹ ಸರ್ಕಸ್ ಮಾಡಿದರೂ ಚಿತ್ರ ಗೆಲ್ಲುತ್ತಿರಲಿಲ್ಲ. ಇದರ ನಡುವೆ ಮಲ್ಟಿ ಸ್ಟಾರ್ ಸಿನಿಮಾ ಜಾನ್ ಜಾನಿ ಜನಾರ್ಧನ್ ಅವರಿಗೆ ಯಶಸ್ಸು ತಂದು ಕೊಟ್ಟಿತು. ಅದೇ ಮೂಡ್ ನಲ್ಲಿ ಅವರು ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಆದರೆ ಯಾಕೋ ಅವರು ಮಚ್ಚು ಲಾಂಗ್ ಹಿಡಿಯುವುದನ್ನು ಮಾತ್ರ ಬಿಡುವುದಿಲ್ಲ ಎನಿಸುತ್ತದೆ. ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಅವರು ಆಕ್ಷನ್ ಗೆ ಹೆಚ್ಚು ಒತ್ತು ಇರುವ ಸಿನಿಮಾಗಳನ್ನೇ ಹೆಚ್ಚಾಗಿ ಒಪ್ಪಿಕೊಳ್ಳುತ್ತಾರೆ. ಇದೇ ರೀತಿ ಈಗ ಅವರು ಆಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದು ಜಾನಕೀ ರಾಮ.
ಹೆಸರು ಕೇಳಿದ ತಕ್ಷಣ ಇದು ಸೆಂಟಿಮೆಂಟ್ ಸಿನಿಮಾ ಇರಬಹುದು ಎನಿಸುತ್ತದೆ. ಆದರೆ ಆಕ್ಷನ್ ಗೆ ಇಲ್ಲಿ ಜಾಸ್ತಿ ಒತ್ತು ಕೊಡಲಾಗಿದೆ ಎಂದು ನಿರ್ದೇಶಕ ಎಸ್. ಕೆ. ಸಂತೋಷ್ ಹೇಳುತ್ತಾರೆ. ಈಗಾಗಲೇ ಇದರ ಚಿತ್ರೀಕರಣ ಪ್ರಾರಂಭವಾಗಿದೆ. ಇದು ಎಸ್.ಕೆ. ಸಂತೋಷ್ ಗೆ ಚೊಚ್ಚಲ ನಿರ್ದೇಶನದ ಸಿನಿಮಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ