Publish Date: Tue, 13 Dec 2016 (09:13 IST)
Updated Date: Tue, 13 Dec 2016 (09:16 IST)
ಹೈದರಾಬಾದ್: ಪ್ರಿಯಾಂಕ ಉಪೇಂದ್ರ ಮತ್ತು ಯುವಿನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಮಮ್ಮಿ ಎಂಬ ಹಾರರ್ ಚಿತ್ರ ಕನ್ನಡದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ತೆಲುಗಿನಲ್ಲೂ ಈ ಚಿತ್ರ ಬಿಡುಗಡೆಯಾಗಲಿದ್ದು, ಸುನಾಮಿ ಎಬ್ಬಿಸುತ್ತಾ ಎಂದು ನೋಡಬೇಕಿದೆ.
ಡಿಸೆಂಬರ್ 16 ರಂದು ಆಂಧ್ರ ಪ್ರದೇಶದಲ್ಲಿ ಚಿನ್ನಾರಿ ಹೆಸರಿನಲ್ಲಿ ಈ ಚಿತ್ರ ತೆರೆ ಕಾಣಲಿದೆ. ಈಗಾಗಲೇ ತೆಲುಗಿನಲ್ಲಿ ಟ್ರೇಲರ್ ಲಾಂಚ್ ಆಗಿದ್ದು, ಭರ್ಜರಿ ಹಿಟ್ ಆಗಿದೆ. ಸುಮಾರು 200 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಇದು ಬಿಡುಗಡೆಯಾಗಲಿದೆ.
ಅಂತೂ ಇಂತೂ ನಿರ್ದೇಶಕ ಲೋಹಿತ್ ಮಮ್ಮಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್. ತೆಲುಗಿನಲ್ಲೂ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಇನ್ನು ತಮಿಳಿನಲ್ಲೂ ಇದನ್ನು ಮಾಡಲು ಜ್ಯೋತಿಕಾ ಸೂರ್ಯ ರೆಡಿಯಾಗಿದ್ದಾರೆ. ಇನ್ನೇನು ಬೇಕು ಒಬ್ಬ ಹೊಸ ನಿರ್ದೇಶಕನಿಗೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ