Select Your Language

Notifications

webdunia
webdunia
webdunia
webdunia

ಭೀಕರ ಅಪಘಾತದಲ್ಲಿ ನಟಿ ರೇಖಾ ಸೇರಿದಂತೆ ಮೂವರ ಸಾವು

ಭೀಕರ ಅಪಘಾತದಲ್ಲಿ ನಟಿ ರೇಖಾ ಸೇರಿದಂತೆ ಮೂವರ ಸಾವು
ಬೆಂಗಳೂರು , ಶುಕ್ರವಾರ, 5 ಮೇ 2017 (13:39 IST)
ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಮಾಡೆಲ್, ಕಿರುತೆರೆ ನಟಿ ರೇಖಾ ಸಿಂಧು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಖಾಸಗಿ ಚಾನೆಲ್‌ಗಳು ವರದಿ ಮಾಡಿವೆ.

ಬೆಂಗಳೂರು- ಚೆನ್ನೈ ಹೆದ್ದಾರಿಯಲ್ಲಿ ನಟಿ ರೇಖಾ ಮತ್ತು ಇತರ ಮೂವರಿದ್ದ ಕಾರು ಅಪಘಾತಕ್ಕೊಳಗಾದಾಗ ರೇಖ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ಕಾರು ಚಾಲಕನ ವೇಗವೋ ಅಥವಾ ತಾಂತ್ರಿಕ ದೋಷವೋ ಎನ್ನುವ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನಟಿ ರೇಖಾ ಸಿಂಧು ಅತ್ಯುತ್ತಮ ನಟಿಯಾಗಿದ್ದು, ಹಲವು ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ತಮಿಳುನಾಡಿನಲ್ಲೂ ಕೆಲ ಧಾರವಾಹಿಗಳಲ್ಲಿ ನಟಿಸುತ್ತಿದ್ದರು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿರ ಕೋಟಿ ಸನಿಹದಲ್ಲಿ ಬಾಹುಬಲಿ-2..!