Select Your Language

Notifications

webdunia
webdunia
webdunia
webdunia

ಸಾವಿರ ಕೋಟಿ ಸನಿಹದಲ್ಲಿ ಬಾಹುಬಲಿ-2..!

ಸಾವಿರ ಕೋಟಿ ಸನಿಹದಲ್ಲಿ ಬಾಹುಬಲಿ-2..!
ಹೈದ್ರಾಬಾದ್ , ಗುರುವಾರ, 4 ಮೇ 2017 (19:16 IST)
ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿರುವ ಬಾಹುಬಲಿ-2 ಚಿತ್ರ ಗಳಿಕೆಯಲ್ಲೂ ದಾಖಲೆ ಬರೆಯುತ್ತಿದೆ. ಚಿತ್ರ ತೆರೆಕಂಡು ವಾರ ಕಳೆಯುತ್ತಾ ಬಂದಿದ್ದು, ಚಿತ್ರ ಗಳಿಕೆ ಸಾವಿರ ಕೋಟಿ ದಾಟುವ ಸೂಚನೆ ಸಿಕ್ಕಿದೆ.
 

ಬಾಕ್ಸ್ ಆಫೀಸ್ ಇಂಡಿಯಾ ಡಾಟ್ ಕಾಮ್ ಲೇಟೆಸ್ಟ್ ವರದಿ ಪ್ರಕಾರ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ನಟಿಸಿರುವ ಬಾಹುಬಲಿ-2 ಗಳಿಕೆಯಲ್ಲಿ ಪಿಕೆ ಮತ್ತು ದಂಗಲ್ ದಾಖಲೆಯನ್ನ ಮುರದಿದೆ. 6 ದಿನಗಳಲ್ಲಿ ಈ ಎರಡೂ ಚಿತ್ರಗಳು 375 ಕೋಟಿ ರೂ. ಗಳಿಸಿದ್ದವು. ಬಾಹುಬಲಿ-2 6 ದಿನಗಳಲ್ಲಿ ವಿಶ್ವಾದ್ಯಂತ 798 ಕೋಟಿ ರೂಪಾಯಿ ಗಳಿಸಿದೆ.

ಏಪ್ರಿಲ್ 28ರಂದು 9000 ಸ್ಕ್ರೀನ್`ಗಳಲ್ಲಿ ವಿಶ್ವಾದ್ಯಂತ ಚಿತ್ರ ಗ್ರ್ಯಾಂಡ್ ರಿಲೀಸ್ ಆಗಿತ್ತು. ಈ ಮಧ್ಯೆ, ಜಪಾನ್ ಮತ್ತು ಚೀನಾ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದ್ರಾಸ್ ಹೈಕೋರ್ಟ್‌ನಿಂದ ನಟ ಕಮಲ್‌ಹಾಸನ್‌ಗೆ ರಿಲೀಫ್