ಸಾಮಾಜಿಕ ಜಾಲತಾಣದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇಧನದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಇಬ್ಬರು ಜತೆಯಾಗಿ ಕ್ಯಾಮಾರಗೆ ಫೋಸ್ ಕೊಟ್ಟಿರುವ ಪೋಟೋ ಇದೀಗ ವೈರಲ್ ಆಗಿದೆ.
ಗುರುವಾರ ರಾತ್ರಿ ಮುಂಬೈನ ಸನ್-ಎನ್-ಸ್ಯಾಂಡ್ ಹೋಟೆಲ್‌ನಲ್ಲಿ ನಡೆದ ವಿವಾಹದ ಆರತಕ್ಷತೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಫೋಟೋದಲ್ಲಿ ಐಶ್ವರ್ಯಾ ಅವರ ತಾಯಿ ಬೃಂದ್ಯಾ ರೈ ಕೂಡಾ ಇದ್ದಾರೆ.
ಚಲನಚಿತ್ರ ನಿರ್ಮಾಪಕ ಅನು ರಂಜನ್ ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು "ತುಂಬಾ ಪ್ರೀತಿಯ ಉಷ್ಣತೆ" ಎಂದು ಬರೆದಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ಅವರು ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿದ್ದಂತೆ ಎಲ್ಲರೂ ನಗುತ್ತಿದ್ದರು. ಚಲನಚಿತ್ರ ನಿರ್ಮಾಪಕ ಮನೀಶ್ ಗೋಸ್ವಾಮಿ ಅವರು ಹಂಚಿಕೊಂಡ ಚಿತ್ರವೊಂದರಲ್ಲಿ, ದಂಪತಿಗಳು ಅತಿಥಿಯೊಂದಿಗೆ ಚಿತ್ರವನ್ನು ಕ್ಲಿಕ್ಕಿಸುತ್ತಿರುವಾಗ ಪರಸ್ಪರ ಹತ್ತಿರವಾಗಿ ನಿಂತಿರುವಂತೆ ಕಂಡುಬಂದಿದೆ.
ಸಾಂಪ್ರದಾಯಿಕ ಕಪ್ಪು ಉಡುಪಿನಲ್ಲಿ ಐಶ್ವರ್ಯಾ ಅವರು ಮಿಂಚಿದರೆ, ಕಪ್ಪು ಸೂಟ್‌ನಲ್ಲಿ ಕ್ಲಾಸಿಯಾಗಿ ಪೋಸ್ ನೀಡಿದ್ದಾರೆ.