Select Your Language

Notifications

webdunia
webdunia
webdunia
webdunia

ಬ್ಯಾಡ್ ಮ್ಯಾನರ್ಸ್ ನಲ್ಲಿ ಅಭಿಷೇಕ್ ಅಂಬರೀಶ್ ಪಾತ್ರವೇನು? ಗುಟ್ಟು ರಟ್ಟು

ಬ್ಯಾಡ್ ಮ್ಯಾನರ್ಸ್ ನಲ್ಲಿ ಅಭಿಷೇಕ್ ಅಂಬರೀಶ್ ಪಾತ್ರವೇನು? ಗುಟ್ಟು ರಟ್ಟು
ಬೆಂಗಳೂರು , ಬುಧವಾರ, 22 ನವೆಂಬರ್ 2023 (08:15 IST)
ಬೆಂಗಳೂರು: ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ತಮ್ಮ ಪಾತ್ರವೇನು ಎಂಬುದನ್ನು ನಾಯಕ ನಟ ಅಭಿಷೇಕ್ ಅಂಬರೀಶ್ ಗುಟ್ಟುಬಿಟ್ಟುಕೊಟ್ಟಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಅಭಿ ತಮ್ಮ ಪಾತ್ರದ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅಭಿ ಮಫ್ತಿಯಲ್ಲಿರುವ ಪೊಲೀಸ್ ಅಧಿಕಾರಿಯಾಗಿ ಪಾತ್ರ ಮಾಡಲಿರುವುದಾಗಿ ಹೇಳಿದ್ದಾರೆ.

ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಇದೇ ವಾರಂತ್ಯಕ್ಕೆ ಅಂದರೆ ನವಂಬರ್ 24 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಅಭಿ ಪವರ್ ಫುಲ್ ಆಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಂ ಕೂಡಾ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಅಭಿನಯದ ಎರಡನೇ ಸಿನಿಮಾ ಇದಾಗಿದೆ. ಇದಲ್ಲದೆ ಮಹೇಶ್ ಕುಮಾರ್ ನಿರ್ದೇಶನದಲ್ಲಿ ಕಾಳಿ ಎನ್ನುವ ಸಿನಿಮಾ ಮಾಡುತ್ತಿದ್ದು, ಅದಿನ್ನೂ ಚಿತ್ರೀಕರಣದ ಹಂತದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪೂಜಾಗಾಂಧಿ ಬಗ್ಗೆ ಹೊಸ ಸುದ್ದಿ ಹರಡುತ್ತಿದೆ ಏನ್ ಗೊತ್ತಾ?