Select Your Language

Notifications

webdunia
webdunia
webdunia
webdunia

ಅಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ಚಿತ್ರತಂಡದಿಂದ ಹೊರನಡೆದ ವಿಜಯ್ ಸೇತುಪತಿ

ಅಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ಚಿತ್ರತಂಡದಿಂದ ಹೊರನಡೆದ ವಿಜಯ್ ಸೇತುಪತಿ
ಚೆನ್ನೈ , ಮಂಗಳವಾರ, 12 ಜನವರಿ 2021 (13:44 IST)
ಚೆನ್ನೈ : ಬಾಲಿವುಡ್ ನಟ ಅಮೀರ್ ಖಾನ್ ಅವರು ಪ್ರಸ್ತುತ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು 1994 ರ ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ ನ ರಿಮೇಕ್ ಆಗಿದೆ.

ಈ ಹಿಂದೆ ಈ ಚಿತ್ರದಲ್ಲಿ ಕಾಲಿವುಡ್ ನ ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.  ಚಿತ್ರತಂಡ ಅವರ ಜೊತೆ ಮಾತುಕತೆ ನಡೆಸಿದ್ದು ವಿಜಯ್ ಒಪ್ಪಿಗೆ ಕೂಡ ನೀಡಿದ್ದಾರೆ ಎನ್ನಲಾಗಿತ್ತು.

ಆದರೆ ಇತ್ತೀಚಿನ ಮಾಹಿತಿ ಪ್ರಕಾರ ವಿಜಯ್ ಸೇತುಪತಿ ಈ ಚಿತ್ರದಿಂದ ಹೊರಬಂದಿದ್ದಾರಂತೆ. ಕಾರಣವೇನೆಂದರೆ ಈ ಚಿತ್ರಕ್ಕಾಗಿ ವಿಜಯ್ ಸೇತುಪತಿ ಸುಮಾರು 25ಕೆಜಿ ಕಳೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ವಿಜಯ್ ಸೇತುಪತಿ ತೂಕ ಇಳಿಸಿಕೊಳ್ಳಲು ವಿಫಲರಾದ ಹಿನ್ನಲೆಯಲ್ಲಿ ಅಮೀರ್ ಖಾನ್ ವಿಜಯ್ ಸೇತುಪತಿಯೊಂದಿಗಿನ ಒಪ್ಪಂದವನ್ನು ರದ್ದುಪಡಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನದಂದು ಬಿಡುಗಡೆಯಾಗಲಿದೆಯಂತೆ ‘ರಾಧೆಶ್ಯಾಮ್’ ಚಿತ್ರದ ಟೀಸರ್