Select Your Language

Notifications

webdunia
webdunia
webdunia
webdunia

ಆರ್ ಜಿವಿ ಮರ್ಡರ್ ಸಿನಿಮಾಕ್ಕೆ ತಡೆಯೊಡ್ಡಿದ ಯುವತಿ

ಆರ್ ಜಿವಿ ಮರ್ಡರ್ ಸಿನಿಮಾಕ್ಕೆ ತಡೆಯೊಡ್ಡಿದ ಯುವತಿ
ಹೈದರಾಬಾದ್ , ಗುರುವಾರ, 6 ಆಗಸ್ಟ್ 2020 (12:03 IST)
ಹೈದರಾಬಾದ್ : ಬೇರೆಯವರ ಜೀವನದ ಸ್ಟೋರಿಯನ್ನು ಸಿನಿಮಾ ಮಾಡಿ ಹಣ ಸಂಪಾದಿಸುತ್ತಿದ್ದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ಇದೀಗ ಯುವತಿಯೊಬ್ಬಳು ದೂರು ದಾಖಲಿಸಿದ್ದಾಳೆ.

ಹೌದು. ಇತ್ತೀಚೆಗಷ್ಟೇ  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ‘ಮರ್ಡರ್’ ಸಿನಿಮಾವನ್ನು ಘೋಷಿಸಿದ್ದು, ಅದರ ಪೋಸ್ಟ್ರ್ ಗಳನ್ನು ಬಿಡುಗಡೆ ಮಾಡಿದ್ದರು. ಸದ್ಯದಲ್ಲೇ ಈ ಸಿನಿಮಾ ತೆರೆ ಕಾಣುವುದಾಗಿ ಹೇಳಿದ್ದರು.

ಆದರೆ ಈ ಸಿನಿಮಾ  ಇಡೀ ದೇಶವನ್ನೇ ತಲ್ಲಣಗೊಳಿಸಿದ ಪ್ರೀತಿಸಿ ಮದ್ವೆಯಾದ ಅಮೃತಾ - ಪ್ರಣಯ್ ಮರ್ಯಾದೆ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಾಗಿತ್ತು. ಆದಕಾರಣ ಅಮೃತ  ನಿರ್ದೇಶಕ ರಾಮ್ ಗೋಪಾಲ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿ  ಸಿನಿಮಾಕ್ಕೆ ತಡೆಯೊಡ್ಡುವಂತೆ ಮನವಿ ಮಾಡಿದ್ದಾಳೆ. ಈ ಹಿನ್ನಲೆಯಲ್ಲಿ ಇಂದು ರಾಮ್ ಗೋಪಾಲ್ ವರ್ಮಾ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿನ ಹಾಸ್ಯನಟ ಪೃಥ್ವಿರಾಜ್ ಆಸ್ಪತ್ರೆಗೆ ದಾಖಲು