Webdunia - Bharat's app for daily news and videos

Install App

ಟ್ವೀಟರ್ ನಲ್ಲಿ ಯುವತಿಯೊಬ್ಬಳು ಜಗ್ಗೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ಯಾಕೆ...?

Webdunia
ಮಂಗಳವಾರ, 1 ಮೇ 2018 (07:44 IST)
ಬೆಂಗಳೂರು : ಜಗ್ಗೇಶ್ ಗೆದ್ದರೆ ಹಿಂದು ಗೆದ್ದಂತೆ ಎಂದು ನಟ ಜಗ್ಗೇಶ್ ಅವರು ಟ್ವೀಟ್ ಮಾಡಿರುವ ಹಿನ್ನಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ವಿಡಿಯೋ ಮೂಲಕ ಯುವತಿಯೊಬ್ಬಳು ಜಗ್ಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.


ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚನಾವಣಾ ಅಖಾಡಕ್ಕಿಳಿಯುತ್ತಿರುವ ನಟ ಜಗ್ಗೇಶ್ ಅವರು ಜಗ್ಗೇಶ್ ಗೆದ್ದರೆ ಅದು ಮೋದಿಜೀ ಗೆಲುವು, ಜಗ್ಗೇಶ್ ಗೆದ್ದರೆ ಮೋದಿಯವರ ಪರಿಕಲ್ಪನೆಗೆ ಗೆಲುವು, ಜಗ್ಗೇಶ್ ಗೆದ್ದರೆ ಅದು ಹಿಂದುವಿನ ಗೆಲುವು, ಜಗ್ಗೇಶ್ ಗೆದ್ದರೆ ಪಾಂಡವರ ಗೆಲುವು, ಕೌರವನ ಅಳಿವು ಜೈಹಿಂದ್ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.


ಈ ಬಗ್ಗೆ ಯುವತಿಯೊಬ್ಬಳು ಪ್ರತಿಕ್ರಿಯಿಸಿ ವಿಡಿಯೋ ಮೂಲಕ ಜಗ್ಗೇಶ್ ನೀವು ರಾಜಕಾರಣಿಯಾಗುವುದಕ್ಕೆ ಮೊದಲು ಚಿತ್ರ ನಟರಾಗಿದ್ದೀರಿ. ನಿಮ್ಮ ಚಿತ್ರಗಳನ್ನು ಬರೀ ಹಿಂದುಗಳು ಮಾತ್ರ ನೋಡಿಲ್ಲ. ಮುಸ್ಲಿಮರು, ಕ್ರೈಸ್ತರು ಎಲ್ಲರೂ ಚಿತ್ರ ನೋಡಿ ನಿಮ್ಮನ್ನು ಬೆಳೆಸಿದ್ದಾರೆ. ಇದೆಲ್ಲಾ ಆದ ಬಳಿಕ ನೀವು ರಾಜಕಾರಣಿ ಆಗಿದ್ದೀರಿ. ಜಗ್ಗೇಶ್ ಗೆದ್ದರೆ ಹಿಂದೂ ಗೆದ್ದಂತೆ ಎಂದು ನೀವು ಹೇಳಿದ್ದು ಯಾಕೆ? ನಾನು ಹಿಂದುನೇ, ಆದರೆ ಕರ್ನಾಟಕದಲ್ಲಿ ಹಿಂದುಗಳೇ ಮಾತ್ರ ಇಲ್ಲ. ನೀವು ಈ ಮಟ್ಟಕ್ಕೆ ಬರೋಕೆ ಹಿಂದುಗಳು ಮಾತ್ರ ಕಾರಣವಲ್ಲ. ನಿಮ್ಮ ಸಿನಿಮಾವನ್ನು ಹಿಂದುಗಳು ಮಾತ್ರವಲ್ಲದೇ ಕ್ರೈಸ್ತರು, ಮುಸ್ಲಿಮರು, ಜೈನರು ಜಾತಿ, ಮತ ಎಲ್ಲ ಬಿಟ್ಟು ನಿಮ್ಮ ಚಿತ್ರಗಳನ್ನು ನೋಡಿ ನಿಮ್ಮನ್ನು ಈ ಮಟ್ಟಕ್ಕೆ ತಂದಿದ್ದಾರೆ. ಅದನ್ನು ದಯವಿಟ್ಟು ಮರಿಬೇಡಿ. ಬೇರೆ ರಾಜಕಾರಣಿಗಳಂತೆ ಆಡಬೇಡಿ. ಏಕೆಂದರೆ ನೀವು ಒಂದು ರಾಜಕಾರಣಿ ಆಗುವ ಮೊದಲು ಕಲಾವಿದರು ಎನ್ನುವುದನ್ನು ಮರೆಯಬೇಡಿ ಎಂದು ತಿಳಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments