ಬೆಂಗಳೂರು: ₹5.50 ಕೋಟಿ ಬಜೆಟ್‌ನಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿ ಇದೀಗ ರಾಜ್ಯದ ಗಡಿಯಾಚೆಗೂ ಕನ್ನಡದ ಸು ಫ್ರಮ್ ಸೋ ಸಿನಿಮಾಗೆ ಬಾಲಿವುಡ್ ನಟ ಅಜಯ್ ದೇವಗನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಸಿನಿಮಾ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದ್ದು, ಅದರಂತೆ ಅವರನ್ನು ಭೇಟಿಯಾಗಿದ್ದೇವೆ ಎಂದು ಜೆಪಿ ತುಮ್ಮಿನಾಡ್ ಹೇಳಿಕೊಂಡಿದ್ದಾರೆ.
ಈ ವಿಚಾರವನ್ನು ನಿರ್ದೇಶಕ ಜೆಪಿ ತುಮ್ಮಿನಾಡ್ ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಜಯ್ ದೇವಗನ್ ಭೇಟಿಯ ಪೋಟೋವನ್ನು ಹಂಚಿಕೊಂಡು ವಿಷಯವನ್ನು ಹೇಳಿಕೊಂಡಿದ್ದಾರೆ.
ಅಜಯ್ ದೇವಗನ್ ಅವರು ನಮ್ಮ ಸು ಫ್ರಮ್ ಸೋ ಚಿತ್ರವನ್ನು ಇಷ್ಟಪಟ್ಟರು ಮತ್ತು ಅದರ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದರು. ಅವರು ನಿಜವಾಗಿಯೂ ಎಂತಹ ಅದ್ಭುತ ವ್ಯಕ್ತಿತ್ವವನ್ನು ಹೊಂದಿದ್ದಾರೆಂದು ತೋರಿಸಿದರು. ಮಹಾನ್ ಅಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಗೌರವ ಮತ್ತು ಪ್ರೀತಿ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಜೆಪಿ ತುಮ್ಮಿನಾಡ್ ನಟಿಸಿ, ನಿರ್ದೇಶಿಸಿರುವ ಸು ಫ್ರಮ್ ಸೋ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿ ಇದೀಗ 100ಕೋಟಿ ಕ್ಲಬ್‌ನತ್ತ ಸಿನಿಮಾ ಸಾಗಿದೆ. ಈ ಸಿನಿಮಾಗೆ ನಟ ರಾಜ್ ಬಿ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ಬಂಡವಾಳ ಹೂಡಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು, ಅವರ ಅಭಿನಯ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.