ವಯನಾಡು ದುರಂತಕ್ಕೆ ಮಿಡಿದ ಅಲ್ಲು ಅರ್ಜುನ್‌ರಿಂದ 25 ಲಕ್ಷ ನೆರವು

Sampriya
ಭಾನುವಾರ, 4 ಆಗಸ್ಟ್ 2024 (15:32 IST)
Photo Courtesy X
ಹೈದರಾಬಾದ್: ಕೇರಳದ ಭೀಕರ ಭೂಕುಸಿತಕ್ಕೆ ಒಳಗಾಗಿರುವ ವಯನಾಡು ಜಿಲ್ಲೆಯಲ್ಲಿ ಪುನರ್ವಸತಿಗಾಗಿ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ 25ಲಕ್ಷ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ಜುಲೈ 30ರಂದು ವಯನಾಡಿನ ಎರಡು ಕಡೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ 219ಕ್ಕೆ ಏರಿಕೆಯಾಗಿದ್ದು, ಇನ್ನೂ 200ಮಂದಿ ನಾಪತ್ತೆಯಾಗಿದ್ದಾರೆ. ಈಗಾಗಲೇ ವಯನಾಡು ದುರಂತಕ್ಕೆ ಮಿಡಿದಿರುವ ಸಿನಿಮಾ ತಾರೆಯರಾದ ನಟ ಸೂರ್ಯ, ಕಾರ್ತಿ, ಜ್ಯೋತಿಕಾ ಹಾಗೂ ರಶ್ಮಿಕಾ ಮಂದಣ್ಣ ಅವರು ಧನ ಸಹಾಯ ನೀಡಿದ್ದಾರೆ.

ಇದೀಗ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಲ್ಲು ಅರ್ಜುನ್, ಯಾವಾಗಲೂ ತನಗೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಿರುವ ರಾಜ್ಯಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

"ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಕೇರಳ ಯಾವಾಗಲೂ ನನಗೆ ತುಂಬಾ ಪ್ರೀತಿಯನ್ನು ನೀಡಿದ್ದು, ಪುನರ್ವಸತಿ ಕಾರ್ಯವನ್ನು ಬೆಂಬಲಿಸಲು ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ನೀಡುವ ಮೂಲಕ ನನ್ನ ಕೈಲಾದಷ್ಟು ಮಾಡಲು ಬಯಸುತ್ತೇನೆ. ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ಮುಂದಿನ ಸುದ್ದಿ
Show comments