Publish Date: Fri, 12 Jan 2024 (16:40 IST)
Updated Date: Fri, 12 Jan 2024 (16:43 IST)
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಆಗಿ ಎರಡು ವಾರಗಳು ಕಳೆದಿವೆ. ಈಗಲೂ ಸಿನಿಮಾ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದು ತಂಡದ ಖುಷಿ ಹೆಚ್ಚಿಸಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಕಾಟೇರ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಯಿತು.
ಈ ಚಿತ್ರವನ್ನು ಜನ ಮೆಚ್ಚಿಕೊಂಡರು. ದರ್ಶನ್ ನಟನೆ, ಚಿತ್ರದ ಕಥೆ ಹಾಗೂ ತರುಣ್ ಸುಧೀರ್ ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದರು. ಈ ಚಿತ್ರ ಎರಡು ವಾರಕ್ಕೆ ಬರೋಬ್ಬರಿ 157 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಹೆಚ್ಚುವುದರಿಂದ ಗಳಿಕೆ ಸ್ವಲ್ಪ ಇಳಿಕೆ ಕಾಣಬಹುದು ಎಂದು ಊಹಿಸಲಾಗಿದೆ. ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ದರ್ಶನ್ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ.