ಬೆಂಗಳೂರು-ಕಾಟೇರ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದರೂ ಅಬ್ಬರ ತಗ್ಗಿಲ್ಲ. ಈಗಲೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಈಗಾಗಲೇ ನೂರು ಕೋಟಿ ರೂಪಾಯಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗಲಿದೆ ಎನ್ನುವ ಕುತೂಹಲ ಮೂಡಿದೆ. ಕಳೆದ ವಾರಕ್ಕಿಂತ ಈ ವಾರ ಕಾಟೇರಕ್ಕೆ ಹೆಚ್ಚಿನ ಚಿತ್ರಮಂದಿರ ಸಿಕ್ಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಗಳಿಕೆ ಕೂಡ ಹೆಚ್ಚುವ ನಿರೀಕ್ಷೆ ಇದೆ.
ಸಲಾರ್ ಸಿನಿಮಾ ರಿಲೀಸ್ ಆದ ವಾರ 406 ಏಕಪರದೆ ಚಿತ್ರಮಂದಿರ ಹಾಗೂ 72 ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಮಲ್ಟಿಪ್ಲೆಕ್ಸ್ಗಳ ಸಂಖ್ಯೆ ಅಷ್ಟೇ ಇದ್ದು ಸಿಂಗಲ್ ಸ್ಕ್ರೀನ್ ಥಿಯೇಟರ್ ಸಂಖ್ಯೆ 462ಕ್ಕೆ ಏರಿಕೆ ಆಗಿದೆ. ಈ ಮೂಲಕ ಕಾಟೇರನ ಅಧಿಪತ್ಯ ಹೆಚ್ಚುತ್ತಿದೆ. ಕಾಟೇರ ಚಿತ್ರದ ಅಬ್ಬರದ ಎದುರು ಸಲಾರ್ ಹಾಗೂ ಡಂಕಿ ಸಿನಿಮಾಗಳ ಅಬ್ಬರ ಕಡಿಮೆ ಆಗಿದೆ.