Webdunia - Bharat's app for daily news and videos

Install App

ಪ್ರತಿಷ್ಠಿತ ಸಂಸ್ಥೆಯ ಪಾಲಾಯ್ತು ರೂಪೇಶ್ ಶೆಟ್ಟಿಯ ʻಅಧಿಪತ್ರʼ ಸಿನಿಮಾದ ಆಡಿಯೊ ಹಕ್ಕು

Sampriya
ಭಾನುವಾರ, 5 ಮೇ 2024 (15:27 IST)
Photo Courtesy X
ಬೆಂಗಳೂರು: ಖ್ಯಾತ ನಿರೂಪಕ, ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ‌ ʻಅಧಿಪತ್ರʼ ಸಿನಿಮಾ ಹೊಸ ನಿರೀಕ್ಷೆ ಹುಟ್ಟುಹಾಕಿದೆ.  ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದ ಆಡಿಯೊ ಹಕ್ಕು ಪ್ರತಿಷ್ಠಿತ ಆಡಿಯೊ ಸಂಸ್ಥೆ ಲಹರಿ ಖರೀದಿ ಮಾಡಿದೆ.

ಈ ಚಿತ್ರದಲ್ಲಿ ರೂಪೇಶ್ ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸಾಥ್ ನೀಡಿದ್ದಾರೆ. ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್‌ನಿಂದಲೂ ಎಲ್ಲರ ಗಮನ ಸೆಳದಿದೆ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.

ತೆರೆಗೆ ಬರಲು ರೆಡಿಯಾಗುತ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಅಧಿಪತ್ರದ ಮೊದಲ ಝಲಕ್ ಹೊರಬೀಳಲಿದೆ.

ಕೋಸ್ಟಲ್‌ವುಡ್‌ನಲ್ಲಿ ಗಿರಿಗಿಟ್‌ ಮತ್ತು ಸರ್ಕಸ್‌ ಚಿತ್ರದ ಮೂಲಕ ಸಕ್ಸಸ್‌ ಪಡೆದ ರೂಪೇಶ್‌ ಶೆಟ್ಟಿ ಸಿನಿಮಾದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್‌ಬಾಸ್‌ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ.

ಚಯನ್ ಶೆಟ್ಟಿ ʼಅಧಿಪತ್ರʼ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿರುವ ಅಧಿಪತ್ರ ಚಿತ್ರವನ್ನು ಕೆ.ಆರ್. ಸಿನಿಕಂಬೈನ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಲಾಗಿದೆ.‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಬಂಡವಾಳ ಹೂಡಿದ್ದಾರೆ. ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments