Webdunia - Bharat's app for daily news and videos

Install App

ನೀತಾ ಅಂಬಾನಿ ಬ್ಯೂಟಿ ಹಿಂದೆ 'ಮಿಕ್ಕಿ' ಕೈಚಳಕ, ಬಾಲಿವುಡ್‌ನಲ್ಲೂ ಈತನಿಗೆ ಬಾರೀ ಡಿಮ್ಯಾಂಡ್

Sampriya
ಭಾನುವಾರ, 5 ಮೇ 2024 (13:02 IST)
photo Courtesy Instagram
ಮುಂಬೈ: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ 60ರ ವಯಸ್ಸಿನಲ್ಲೂ ಯುವತಿಯರು ನಾಚುವಂತೆ ತಮ್ಮ ಬ್ಯೂಟಿಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಇನ್ನೂ ಯಾವುದೇ ಇವೆಂಟ್ ಇರಲಿ, ಸಾರ್ವಜನಿಕ ಕಾರ್ಯಕ್ರಮಗಳಿರಲಿ ನೀತಾ ಅಂಬಾನಿಯವರು ತುಂಬಾನೇ ಸುಂದರವಾಗಿ ರೆಡಿಯಾಗುತ್ತಾರೆ.

ಗ್ರ್ಯಾಂಡ್ ರೆಡ್ ಕಾರ್ಪೆಟ್ ಈವೆಂಟ್ ಆಗಿರಲಿ ಅಥವಾ ಅದ್ದೂರಿ ಕೌಟುಂಬಿಕ ಕಾರ್ಯಕ್ರಮವಾಗಿರಲಿನೀತಾ ಅಂಬಾನಿ ಅವರು ಯುವತಿಯರು ನಾಚುವಂತೆ ರೆಡಿಯಾಗುತ್ತಾರೆ. ಇನ್ನೂ ಇವರು ಇಷ್ಟೊಂದು ಸುಂದರವಾಗಿ ಕಾಣಲು  ಕಾರಣ ಯಾರೆಂದರೆ ಅವರ ಮೇಕಪ್ ಮ್ಯಾನ್ ಮಿಕ್ಕಿ ಕಂಟ್ರಾಕ್ಟರ್.

ಇವರ ಹೆಸರು ಫ್ಯಾಷನ್ ಜಗತ್ತಿನಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ.  ಅವರು 1992 ರಲ್ಲಿ ಕಾಜೋಲ್ ಅವರಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುವ ಮೂಲಕ ಬಾಲಿವುಡ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಇವರು ಸತತ ಮೂರು ದಶಕಗಳಿಂದ ಸ್ಟಾರ್ ನಟಿಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸದ್ಯ ಮಿಕ್ಕಿ ಕಾಂಟ್ರಾಕ್ಟರ್ ಅವರು  ಅಂಬಾನಿ ಕುಟುಂಬದವರಿಗೆ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.

ನೀತಾ ಅಂಬಾನಿ ಮಾತ್ರವಲ್ಲ, ಅವರ ಮಗಳು ಇಶಾ ಅಂಬಾನಿ ಮತ್ತು ಅವರ ಸೊಸೆ ಶ್ಲೋಕಾ ಅಂಬಾನಿ ಕೂಡ ಯಾವಾಗಲೂ  ಮಿಕ್ಕಿ ಕೈಯಿಂದಲೇ ಮೇಕಪ್ ಮಾಡಿಸಿಕೊಳ್ಳುತ್ತಾರೆ.

ಮಿಕ್ಕಿ ಕಾಂಟ್ರಾಕ್ಟರ್ ಸಂಬಳ ಎಷ್ಟು?

ಈ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮೇಕಪ್ ಕಲಾವಿದರಲ್ಲಿ ಮಿಕ್ಕಿ ಒಬ್ಬರು. ಅವರು ಮುಂಬೈನಲ್ಲಿ ಪ್ರತಿ ವ್ಯಕ್ತಿಗೆ ದಿನಕ್ಕೆ 75,000 ರಿಂದ  1 ಲಕ್ಷದವರೆಗೆ ಶುಲ್ಕ ವಿಧಿಸುತ್ತಾರೆ ಎಂದು ವರದಿಯಾಗಿದೆ.

ಇವರು ನೀತಾ ಅಂಬಾನಿ ಅಲ್ಲದೆ ಬಾಲಿವುಡ್ ನಟಿ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಮತ್ತು ಅನುಷ್ಕಾ ಶರ್ಮಾ ಅವರಿಗೂ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments