ದರ್ಶನ್ ಗೆ ಮನೆ ಊಟ ಎಲ್ಲಾ ಕೊಡಕ್ಕಾಗಲ್ಲಾರೀ..: ಕೋರ್ಟ್ ಕೊಟ್ಟ ಕಾರಣಗಳೇನು

Sampriya
ಗುರುವಾರ, 25 ಜುಲೈ 2024 (15:49 IST)
ಬೆಂಗಳೂರು: ನಟ ದರ್ಶನ್‌ ಮನೆಯೂಟ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದ್ದು, ಇದರಿಂದ ದರ್ಶನ್‌ಗೆ ಜೈಲೂಟನೇ ಗತಿಯಾಗಿದೆ.

ಜೈಲೂಟ ಸರಿಹೊಂದದೆ ಅಜೀರ್ಣ, ಅತಿಸಾರ ಆಗಿದೆ ಎಂದು ದರ್ಶನ್ ಅವರ ಪರ ವಕೀಲ ಮನೆಯೂಟ ನೀಡುವಂತೆ ಅನುಮತಿ ಕೇಳಿದ್ದರು.  ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು.

ವಿಐಪಿ ಕೈದಿಗಳು ಮಾತ್ರ ಈ ರೀತಿ ಡಿಮ್ಯಾಂಡ್ ಮಾಡ್ತಾರೆ. ಬೇರೆ ಕೈದಿಗಳು ಜೈಲೂಟವನ್ನೇ ಸೇವನೆ ಮಾಡುತ್ತಾರೆ. ವಿಐಪಿಗಳಿಗೆ ಮಾತ್ರ ಇಂತಹ ಟ್ರೀಟ್ ಮೆಂಟ್ ಕೊಡಬಾರದು ಎಂದು ಸರ್ಕಾರೀ ಅಭಿಯೋಜಕರು ವಾದಿಸಿದ್ದರು. ಇದನ್ನು ಕೋರ್ಟ್ ಪುರಸ್ಕರಿಸಿದೆ.

ಇದಕ್ಕೆ ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಇನ್ನೂ ಹಲವು ದಿನಗಳ ಕಾಲ ದರ್ಶನ್​ ಜೈಲೂಟ ಮಾಡುವುದು ಅನಿವಾರ್ಯ ಆಗಿದೆ.

ಎರಡೂ ಕಡೆ ವಾದವನ್ನು ಆಲಿಸಿದ ಜಡ್ಜ್ ವಿಶ್ವನಾಥ್ ಸಿ ಗೌಡರ್ ಅವರು ಇದೀಗ ಆದೇಶ ಹೊರಡಿಸಿದ್ದಾರೆ.

ಕೋರ್ಟ್ ಕೊಟ್ಟ ಕಾರಣಗಳಿವು: ಕೊಲೆ ಪ್ರಕರಣದ ಆರೋಪಿಗಳಿಗೆ ಮನೆಯೂಟ, ಬಟ್ಟೆ ಮತ್ತು ಹಾಸಿಗೆ ನೀಡಲು ಅವಕಾಶವಿಲ್ಲ. ಜೈಲಿನ ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ದರ್ಶನ್ ಕೊಲೆ ಪ್ರಕರಣದ ಆರೋಪಿಯಾಗಿರುವುದರಿಂದ ಈ ಸೌಲಭ್ಯ ನೀಡಲು ಆಗುವುದಿಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅ‍ಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಪಂಜಾಬಿ ಗಾಯಕ ರಾಜವೀರ್ ಜವಾಂಡ ನಿಧನ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ರಾಜ್ಯ ಸರ್ಕಾರದ ವಿಶೇಷ ಯೋಜನೆಗೆ ರಾಯಭಾರಿಯಾದ ವಸಿಷ್ಠ ಸಿಂಹ

ಬಿಗ್‌ಬಾಸ್‌ ವೀಕ್ಷಕರಲ್ಲಿ ಕ್ಷಮೆಕೋರಿದ ಕಲರ್ಸ್ ಕನ್ನಡ ವಾಹಿನಿ

ಮುಂದಿನ ಸುದ್ದಿ
Show comments