Select Your Language

Notifications

webdunia
webdunia
webdunia
webdunia

ಕ್ಯೂ ಕಡಿಮೆ ಆಗಬೇಕಾದ್ರೆ ರೂ. 10 ಲಕ್ಷ ಕೋಟಿ ಬೇಕು!

ಕ್ಯೂ ಕಡಿಮೆ ಆಗಬೇಕಾದ್ರೆ ರೂ. 10 ಲಕ್ಷ ಕೋಟಿ ಬೇಕು!
New Delhi , ಮಂಗಳವಾರ, 6 ಡಿಸೆಂಬರ್ 2016 (11:01 IST)
ಬ್ಯಾಂಕು, ಎಟಿಎಂ ಮುಂದೆ ಇರುವಂತಹ ಕ್ಯೂ ಕಡಿಮೆ ಆಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಬೇಕಾದರೆ ಹೊಸ 500 ನೋಟುಗಳು ಚಲಾವಣೆಗೆ ಬರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 
 
ಎಸ್‌ಬಿಐ ವರದಿಯ ಪ್ರಕಾರ ಜನರ ಕಷ್ಟ ತೀರಬೇಕೆಂದರೆ ರೂ. 10 ಲಕ್ಷ ಕೋಟಿ ಚಲಾವಣೆಯಲ್ಲಿರಬೇಕೆಂದು, ಆಗಲೇ ಕ್ಯೂಗಳು ಕಡಿಮೆ ಆಗುತ್ತವೆ ಎಂದಿದ್ದಾರೆ. ಆದರೆ ಈಗ ರೂ. 500 ನೋಟುಗಳು ಇಲ್ಲ. ರೂ. 3-4 ಲಕ್ಷ ಕೋಟಿ ಡಿಜಿಟಲ್ ಆಗಿ ಬದಲಾಗಬೇಕು ಎಂದಿದ್ದಾರೆ. 
 
ದೇಶದಾದ್ಯಂತ ಸುಮಾರು 49 ಸಾವಿರ ಎಸ್‌ಬಿಎಂ ಎಟಿಎಂಗಳಿವೆ. 43 ಸಾವಿರ ಎಟಿಎಂಗಳನ್ನು ಹೊಸ ನೋಟಿಗೆ ಅನುಗುಣವಾಗಿ ಬದಲಾಯಿಸಿದ್ದೇವೆ. ಪ್ರತಿದಿನ ಎಸ್‍ಬಿಎಂ ಮೂಲಕ ರೂ. 17 ಸಾವಿರ ಕೋಟಿಯಿಂದ ರೂ. 19 ಸಾವಿರ ಕೋಟಿ ನಗದು ತುಂಬುತ್ತಿದ್ದೇವೆ ಎಂದು ವಿವರ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್‌ಗೆ ಜೋಡಿಸಬಹುದಾದ 360 ಡಿಗ್ರಿ ಕ್ಯಾಮೆರಾ