Select Your Language

Notifications

webdunia
webdunia
webdunia
webdunia

ಶಿಯೋಮಿಯಿಂದ ಹೊಸ ಉತ್ಪನ್ನ...ಏನಿರಬಹುದು?

ಶಿಯೋಮಿಯಿಂದ ಹೊಸ ಉತ್ಪನ್ನ...ಏನಿರಬಹುದು?
New Delhi , ಮಂಗಳವಾರ, 7 ಮಾರ್ಚ್ 2017 (18:29 IST)
ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ಜನಪ್ರಿಯವಾಗಿರುವ ಚೀನಾ ದಿಗ್ಗಜ ಶಿಯೋಮಿ ಈಗಾಗಲೆ ಸ್ಮಾರ್ಟ್ ಸ್ಕೇಲ್, ಸ್ಮಾರ್ಟ್ ಕ್ಯಾಮೆರಾ, ಸ್ಕೂಲರ್‌ನಂತಹ ಕೆಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಇನ್ನೊಂದು ಹೊಸ ಉತ್ಪನ್ನದೊಂದಿಗೆ ಗ್ರಾಹಕರ ಮುಂದೆ ಬರಲು ಸಿದ್ಧವಾಗಿದೆ.
 
ಶಿಯೋಮಿ ಈ ವಾರದಲ್ಲೇ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದು ಕಾಫಿ ಮೆಷಿನ್ ಅನ್ನುವುದು ವಿಶೇಷ. ಈ ಮೆಷಿನ್ ಬಳಕೆದಾರರು ಸ್ಮಾರ್ಟ್ ಫೋನ್ ಮೂಲಕ ಆಪರೇಟ್ ಮಾಡಿಕೊಳ್ಳುವ ರೀತಿಯಲ್ಲಿ ಕಂಪೆನಿ ತಯಾರಿಸಿದೆ ಎಂದು ವರದಿ ಹೇಳುತ್ತಿದೆ.
 
ಮಾರ್ಚ್ 7ರಂದು ಇದನ್ನು ಲಾಂಚ್ ಮಾಡುತ್ತಿರುವುದಾಗಿ ತಿಳಿಸಿದೆ. ಶಿಯೋಮಿ ತನ್ನ ಉತ್ಪನ್ನದ ಶ್ರೇಣಿಯನ್ನು ವಿಸ್ತರಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಏರ್ ಫ್ಯೂರಿಫಯರ್, ಪೆನ್ನುಗಳಿಂದ ಹಿಡಿದು ಸ್ಮಾರ್ಟ್ ಕುಕ್ಕರ್‌ವರೆಗು ಶಿಯೋಮಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ನಲ್ಲಿ ಅತ್ಯಂತ ಜನಪ್ರಿಯತೆಯುಳ್ಳ ಶಿಯೋಮಿ ಮುಂದಿನ ದಿನಗಳಲ್ಲಿ ಶಿಯೋಮಿ ಎಂ6 ಬಿಡುಗಡೆ ಮಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ?: ತಿಮ್ಮಪ್ಪ