Select Your Language

Notifications

webdunia
webdunia
webdunia
webdunia

ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ?: ತಿಮ್ಮಪ್ಪ

ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ?: ತಿಮ್ಮಪ್ಪ
ಬೆಂಗಳೂರು , ಮಂಗಳವಾರ, 7 ಮಾರ್ಚ್ 2017 (18:28 IST)
ಕುಮಾರ್ ಬಂಗಾರಪ್ಪ ವಿರುದ್ಧ ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ ಎಂದು ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಮಾಡಲು ಚೆನ್ನಾಗಿ ದುಡಿಯಬೇಕು. ಜನರ ಒಲವು ಗಳಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ರಾಜಕಾರಣಿಯಾಗಬಲ್ಲ ಎಂದು ಸಲಹೆ ನೀಡಿದ್ದಾರೆ.
 
ಕುಮಾರ ಬಂಗಾರಪ್ಪ ಬಗ್ಗೆ ಅವರಪ್ಪ ಸರಿಯಾಗಿ ಹೇಳಿದ್ದ. ಮನೆಯಿಂದ ತಂದೆ ತಾಯಿಯನ್ನು ಹೊರಹಾಕಿದವರು ಯಾರು? ಕುಮಾರ್ ಬಂಗಾರಪ್ಪ ಬೆಳವಣಿಗೆ ತಡೆಯಲು ನಾನ್ಯಾರು? ದ್ವೇಷ ಸಾಧಿಸಿ ನನಗೆ ಏನು ಆಗಬೇಕಾಗಿಲ್ಲ ಎನ್ನುವುದನ್ನು ಕುಮಾರ್ ಬಂಗಾರಪ್ಪ ಅರಿತರೆ ಒಳ್ಳೆಯದು ಎಂದು ತಿಳಿಸಿದ್ದಾರೆ.
 
 ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಲವು ದಶಕಗಳಿಂದ ನನ್ನ ಮೇಲೆ ಧ್ವೇಷ ಸಾಧಿಸುತ್ತಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಆರೋಪಿಸಿದ್ದರು. ಇಂದು ಕುಮಾರ್ ಬಂಗಾರಪ್ಪ ಆರೋಪಕ್ಕೆ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್‌‌ಗೆ ಒಳ್ಳೆಯ ರಾಜಕಾರಣಿಯಾಗುವ ಗುಣವಿದೆ: ಕಾಗೋಡು