Select Your Language

Notifications

webdunia
webdunia
webdunia
webdunia

ಶಿಯೋಮಿ ಬಾರಿ ಆಫರ್: ಇಂದು ನಾಳೆ ಮಾತ್ರ

ಶಿಯೋಮಿ ಬಾರಿ ಆಫರ್: ಇಂದು ನಾಳೆ ಮಾತ್ರ

ಗುರುಮೂರ್ತಿ

ಬೆಂಗಳೂರು , ಬುಧವಾರ, 20 ಡಿಸೆಂಬರ್ 2017 (15:18 IST)
ಭಾರತದಲ್ಲಿನ ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರಕ್ಕೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರಪಂಚದ 5 ನೇ ಅತೀ ದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಶಿಯೋಮಿ ಭಾರತದಲ್ಲಿರುವ ಗ್ರಾಹಕರಿಗಾಗಿ ತನ್ನ ಉತ್ಪನ್ನಗಳ ಮೇಲೆ ಬಾರಿ ಆಫರ್ ನೀಡುತ್ತಿದೆ.
ಇತ್ತೀಚಿಗೆ ಎರಡು ಕಡಿಮೆ ಬೆಲೆಯ ಮೊಬೈಲ್ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಶಿಯೋಮಿ, ನಂ 1 ಮೀ ಫ್ಯಾನ್ ಸೇಲ್ ಆಫರ್ ಅಡಿಯಲ್ಲಿ ಇಂದು ಮತ್ತು ನಾಳೆ ತನ್ನ ಎಲ್ಲಾ ಉತ್ಪನ್ನಗಳ ಮೇಲೆ ಬಾರಿ ರಿಯಾಯಿತಿ ಘೋಷಿಸಿದೆ.
 
ಈ ಆಫರ್ Mi.com, Flipkart.com ಮತ್ತು Amazon.in. ನಲ್ಲಿ ಇಂದಿನಿಂದ ಲಭ್ಯವಾಗುತ್ತಿದ್ದು ಶಿಯೋಮಿ ಮೊಬೈಲ್ ಮಾತ್ರವಲ್ಲದೇ ತನ್ನ ಇತರ ಉತ್ಪನ್ನಗಳ ಮೇಲೆ ಸಹ ಈ ಆಫರ್ ಅನ್ವಯವಾಗುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 
ಅಲ್ಲದೇ ಈ ಎರಡು ದಿನದ ಮಾರಾಟದಲ್ಲಿ ಗ್ರಾಹಕರಿಗಾಗಿ ಪ್ರತಿ ಗಂಟೆಗೆ ಶಿಯೋಮಿ ಖರೀದಿದಾರರು ಕೂಪನ್‌ಗಳನ್ನು ಪಡೆಯಬಹುದಾಗಿದ್ದು, ಮೋಬಿಕ್ವಿಕ್ ಮೂಲಕ ಪಾವತಿಸುವ ಗ್ರಾಹಕರು 4000 ವರೆಗಿನ ಸುಪರ್‌ಕ್ಯಾಶ್ ಅನ್ನು ಪಡೆಯಬಹುದು ಮತ್ತು ಹಂಗಾಮಾ ಮ್ಯೂಸಿಕ್‌ನ 12 ತಿಂಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೋಡೆಗೆ ಡಿಕ್ಕಿ ಹೊಡೆದ ಮೆಟ್ರೋ ರೈಲು