Publish Date: Wed, 20 Dec 2017 (14:46 IST)
Updated Date: Wed, 20 Dec 2017 (14:49 IST)
ಮೆಜೆಂತಾ ಲೈನ್ ಅನ್ನು ಕಾರ್ಯಗತಗೊಳಿಸಲು ಮಂಗಳವಾರದಂದು ಪರೀಕ್ಷಾರ್ಥವಾಗಿ ಸಂಚಾರಕ್ಕೆ ಚಾಲಕ ರಹಿತವಾಗಿ ಹಳಿ ಮೇಲೆ ಇಳಿದ ದೆಹಲಿ ಮೆಟ್ರೋ ರೈಲು ಕಳಿಂದಿ ಕುಂಜ್ ಮೆಟ್ರೊ ನಿಲ್ದಾಣದಲ್ಲಿ ತಡೆಗೋಡೆಗೆ ಗುದ್ದಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿತ್ತು. ಯಾವುದೇ ಅನಾಹುತಗಳು ಸಂಭವಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೊಟಾನಿಕಲ್ ಗಾರ್ಡನ್ ಮತ್ತು ಕಲ್ಕಾ ಜಿ ನಡುವಿನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
ಇದು ಚಾಲಕ ರಹಿತವಾಗಿ ಚಾಲನೆಯಾಗುವ ಮೊದಲ ಮೆಟ್ರೊ ರೈಲು ಮಾರ್ಗವಾಗಿದೆ ಹಾಗೂ ಇದು ದೇಶದಲ್ಲಿ ಮೊದಲನೆಯದ್ದಾಗಿದೆ. ಆದಾಗ್ಯೂ, ಇದೇ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರದ ಸಮಯದಲ್ಲಿ ಸಂಭವಿಸಿದ ಏರಡನೇ ಮೆಟ್ರೊ ರೈಲು ಅಪಘಾತ ಇದಾಗಿದೆ. ಸೋಮವಾರದಂದು, ಧೌಲಾ ಕುವಾನ್ ಮತ್ತು ದಕ್ಷಿಣ ಕ್ಯಾಂಪಸ್ ಮೆಟ್ರೊ ನಿಲ್ದಾಣದ ಪಿಂಕ್ ಲೈನ್‌ನ ನಡುವಿನ ಇನ್ನೊಂದು ಪರೀಕ್ಷಾರ್ಥ ಸಂಚಾರದ ಮೆಟ್ರೊ ರೈಲು ಹಳಿತಪ್ಪಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.